ದೆಹಲಿ ಆಸ್ಪತ್ರೆಯಲ್ಲಿ ಎಂಪಾಕ್ಸ್ ರೋಗಿಗೆ ಜನನಾಂಗದ ಹುಣ್ಣು, ಚರ್ಮದ ದದ್ದು: ಆದರೆ ಜ್ವರವಿಲ್ಲ…?

ನವದೆಹಲಿ: ಇಲ್ಲಿನ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಾಗಿರುವ ಎಂಪಾಕ್ಸ್‌ ರೋಗಿಯ ಸ್ಥಿತಿ ಸ್ಥಿರವಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಮಂಗಳವಾರ ತಿಳಿಸಿದ್ದಾರೆ.

ಅವರು ಎಂಪಾಕ್ಸ್ ಮತ್ತು ಡೆಂಗ್ಯೂ ಪ್ರಕರಣಗಳನ್ನು ಎದುರಿಸಲು ಸಿದ್ಧತೆಗಳನ್ನು ಪರಿಶೀಲಿಸಲು ಹಿಂದಿನ ದಿನ ಆಸ್ಪತ್ರೆಯಲ್ಲಿ ಹಠಾತ್ ತಪಾಸಣೆ ನಡೆಸಿದ್ದರು.

LNJP ಆಸ್ಪತ್ರೆಯಲ್ಲಿ mpox ದೃಢಪಡಿಸಿದ ಒಬ್ಬ ರೋಗಿಯಿದ್ದಾರೆ. ಅವರು ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ. ಅವರ ವಿದೇಶ ಪ್ರವಾಸದ ಸಮಯದಲ್ಲಿ ಅವರು ಸೋಂಕಿಗೆ ಒಳಗಾಗಿದ್ದಾರೆ. ರೋಗಿಯನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಪ್ರತ್ಯೇಕಿಸಲಾಗಿದೆ. ಅವರು ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಹರಿಯಾಣದ ಹಿಸಾರ್‌ ನ ನಿವಾಸಿಯಾಗಿರುವ 26 ವರ್ಷದ ರೋಗಿಗೆ ಕೇವಲ ಜನನಾಂಗದ ಹುಣ್ಣು ಮತ್ತು ಚರ್ಮದ ದದ್ದುಗಳಿವೆ. ಆದರೆ, ಜ್ವರವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೋಗಿಯನ್ನು ಆಸ್ಪತ್ರೆಯ ವಿಪತ್ತು ನಿರ್ವಹಣಾ ವಾರ್ಡ್‌ನಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಭಾರದ್ವಾಜ್ ಅವರು, ಎಂಪಾಕ್ಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಏಕೆಂದರೆ ಇದು ಗಾಳಿಯ ಮೂಲಕ ಅಲ್ಲ, ಸಂಪರ್ಕದ ಮೂಲಕ ಹರಡುತ್ತದೆ ಎಂದಿದ್ದಾರೆ.

ಇದು “ಪ್ರತ್ಯೇಕವಾದ ಪ್ರಕರಣ” ಮತ್ತು ಸಾರ್ವಜನಿಕರಿಗೆ ತಕ್ಷಣದ ಅಪಾಯವಿಲ್ಲ. ರೋಗಿಯನ್ನು ಶನಿವಾರ ದೆಹಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read