ಸ್ವಪಕ್ಷ ಬಿಜೆಪಿ ವಿರುದ್ಧವೇ ಹರಿಹಾಯ್ದ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹೇಳಿದ್ದೇನು ಗೊತ್ತಾ…?

ದಾವಣಗೆರೆ: ಬಿಜೆಪಿ ನಾವಿಕನಿಲ್ಲದ ಹಡಗಿನಂತಾಗಿದೆ. ಇಷ್ಟು ದಿನವಾದರೂ ವಿಪಕ್ಷ ನಾಯಕರನ್ನು ನೇಮಕ ಮಾಡಿಲ್ಲ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಮಾಜಿ ಸಚಿವ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪರನ್ನು ಕಡೆಗಣಿಸಿದ್ದರಿಂದ ಬಿಜೆಪಿಗೆ ಇಂತಹ ಪರಿಸ್ಥಿತಿ ಬಂದಿದೆ. ನಮ್ಮವರ ತಪ್ಪಿನಿಂದ ನಾವೆಲ್ಲರೂ ಸೋಲುವಂತಾಯಿತು ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಗೆ ನನ್ನ ಅಗತ್ಯವಿಲ್ಲ. ಸೋತವರನ್ನು ತಗೊಂಡು ಏನು ಮಾಡುತ್ತಾರೆ? ಕಾಂಗ್ರೆಸ್ ನವರು ನನ್ನನ್ನು ಆಹ್ವಾನ ಮಾಡಿಲ್ಲ, ನಾನು ಅವರನ್ನು ಕೇಳಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆಗೆ ರಾಜಕೀಯ ಮೀರಿದ ಸ್ನೇಹವಿದೆ ಎಂದು ತಿಳಿಸಿದ್ದಾರೆ.

ನನಗೆ ಲೋಕಸಭೆ ಚುನಾವಣೆ ಟಿಕೆಟ್ ಸಿಗುತ್ತದೆ ಎಂಬ ಆತ್ಮವಿಶ್ವಾಸವಿದೆ. ಪ್ರತಿ ಬೂತ್ ಮಟ್ಟದಲ್ಲಿ ಪ್ರಧಾನಿ ಮೋದಿ ಸರ್ಕಾರದ ಸಾಧನೆಯ ಕರ ಪತ್ರಗಳನ್ನು ಹಂಚುತ್ತಿದ್ದೇನೆ. ಪಕ್ಷಕ್ಕೆ ಮೋದಿ ಎಷ್ಟು ಮುಖ್ಯವೋ ಯಡಿಯೂರಪ್ಪ ಕೂಡ ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ.

ಕರ್ನಾಟಕದ ರಾಜಕಾರಣವನ್ನು ಎಲ್ಲೋ ಕುಳಿತುಕೊಂಡು ನಿಯಂತ್ರಣ ಮಾಡುತ್ತಿದ್ದಾರೆ. ಇದೆಲ್ಲವೂ ಮುಂದಿನ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯ ಬಿಜೆಪಿ ಘಟಕಕ್ಕೆ ವರ್ಚಸ್ಸು ಇರುವಂತಹ ನಾಯಕ ಬೇಕು. ಬಿ.ಎಸ್.ವೈ. ನಾಯಕತ್ವದಲ್ಲಿ ಮಾತ್ರ ಲೋಕಸಭೆ ಚುನಾವಣೆ ಗೆಲ್ಲಲು ಸಾಧ್ಯ. ಯಡಿಯೂರಪ್ಪರನ್ನು ಕಡೆಗಣಿಸಿ ಚುನಾವಣೆಗೆ ಹೋದರೆ ಬಿಜೆಪಿಗೆ ಬಹಳ ಕಷ್ಟ ಇದೆ ಎಂದು ಹೇಳಿದ್ದಾರೆ.

ನನಗೆ ಸಚಿವ ಸ್ಥಾನ ಸಿಗುವುದನ್ನು ನಮ್ಮವರೇ ತಪ್ಪಿಸಿದ್ದರು. ನನಗೆ ಮತ್ತು ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಸಚಿವ ಸ್ಥಾನ ತಪ್ಪಿಸಿದ್ದರು. ಸಚಿವ ಸ್ಥಾನ ತಪ್ಪಿದ್ದರೆ ಬಗ್ಗೆ ನನಗೆ ಬಹಳ ನೋವು ಇದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read