BREAKING NEWS: ದೇವಸ್ಥಾನದ ಗೋಪುರಕ್ಕೆ ಡಿಕ್ಕಿ ಹೊಡೆದು ವಿಮಾನ ಪತನ

ಮಧ್ಯಪ್ರದೇಶದ ರೇವಾದಲ್ಲಿ ದೇವಸ್ಥಾನದ ಗೋಪುರಕ್ಕೆ ವಿಮಾನ ಡಿಕ್ಕಿ ಹೊಡೆದ ಪತನವಾಗಿದ್ದು, ಪೈಲಟ್ ಸಾವನ್ನಪ್ಪಿದ್ದಾರೆ.

ತರಬೇತಿ ನಿರತ ವಿಮಾನವೊಂದು ದೇವಸ್ಥಾನದ ಗುಮ್ಮಟಕ್ಕೆ ಅಪ್ಪಳಿಸಿತು. ಇದರಿಂದ ವಿಮಾನದಲ್ಲಿದ್ದ ಪೈಲಟ್ ಮತ್ತು ಟ್ರೈನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಹಿರಿಯ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಖಾಸಗಿ ತರಬೇತಿ ಕಂಪನಿಯ ವಿಮಾನವು ದೇವಾಲಯದ ಗುಮ್ಮಟ ಮತ್ತು ವಿದ್ಯುತ್ ಕೇಬಲ್‌ಗಳಿಗೆ ಡಿಕ್ಕಿ ಹೊಡೆದ ನಂತರ ಪತನಗೊಂಡಿದೆ. ಚೌರ್ಹತಾ ಪೊಲೀಸ್ ಠಾಣಾ ವ್ಯಾಪ್ತಿಯ ಉಮ್ರಿ ಗ್ರಾಮದ ದೇವಸ್ಥಾನದ ಸಮೀಪ ಈ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಪೈಲಟ್ ಪ್ರಾಣ ಕಳೆದುಕೊಂಡಿದ್ದಾರೆ. ಪೈಲಟ್‌ಗಳಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಂಜಯ್ ಗಾಂಧಿ ವೈದ್ಯಕೀಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

https://twitter.com/ANI/status/1611212856195960832

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read