ಸರ್ಕಾರಿ ಉದ್ಯೋಗದಲ್ಲಿರುವ ವಧು ಬೇಕು…! ಪೋಸ್ಟರ್​ ಹಿಡಿದು ನಿಂತ ಯುವಕ

ಸಾಮಾಜಿಕ ಜಾಲತಾಣ ಎಂದರೆ ಅದು ಅತ್ಯಂತ ವಿಲಕ್ಷಣ ಮತ್ತು ಉಲ್ಲಾಸದ ವಿಡಿಯೋಗಳನ್ನು ನೋಡುವ ಸ್ಥಳವಾಗಿದೆ. ದಿನವೂ ಚಿತ್ರ-ವಿಚಿತ್ರ ವಿಡಿಯೋಗಳನ್ನು ಅದರಲ್ಲಿ ಕಾಣಬಹುದು. ಅಂಥದ್ದೇ ಒಂದು ವಿಲಕ್ಷಣ ಜಾಹೀರಾತೀಗ ವೈರಲ್​ ಆಗಿದೆ.

ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಹಲವು ಗಂಡುಮಕ್ಕಳು ಗೋಳಾಡುವುದು ಇದೆ. ವಧು-ವರರ ವೇದಿಕೆಯಲ್ಲಿ ಜಾಹೀರಾತು ಕೊಡುವುದು ಇದೆ. ಆದರೆ ಇಲ್ಲೊಬ್ಬ ಯುವಕ ಮಾತ್ರ ತನಗೆ ವಧು ಬೇಕು ಎನ್ನುವ ಪೋಸ್ಟರ್​ ಹಿಡಿದು ಜನನಿಬಿಡ ಮಾರುಕಟ್ಟೆಯಲ್ಲಿ ಕಿಕ್ಕಿರಿದಿರುವ ಸಾರ್ವಜನಿಕರ ಮುಂದೆ ನಿಂತಿರುವ ವಿಡಿಯೋ ವೈರಲ್​ ಆಗಿದೆ.

ಪೋಸ್ಟರ್ ಮೇಲಿನ ಬರಹ ವಿಶಿಷ್ಟವಾಗಿದೆ. “ನನಗೆ ಮದುವೆಗೆ ಸರ್ಕಾರಿ ಕೆಲಸವಿರುವ ಹುಡುಗಿ ಬೇಕು, ನಾನು ವಧು ದಕ್ಷಿಣೆ ಕೊಡುತ್ತೇನೆ” ಎಂದು ಬರೆದುಕೊಂಡಿದ್ದಾನೆ. ಈ ವಿಡಿಯೋ ಮಧ್ಯಪ್ರದೇಶದ ಛಿಂದ್‌ವಾರಾದ್ದಾಗಿದೆ.

ಹಲವರು ಇದನ್ನು ನೋಡಿ ನಗುತ್ತಿದ್ದರೆ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವಧುದಕ್ಷಿಣೆಯನ್ನು ನೀಡುವುದಾಗಿ ಹೇಳಿದ್ದರಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಪತ್ನಿಗೆ ವಧು ದಕ್ಷಿಣೆ ಕೊಟ್ಟರೆ ವಾಪಸ್​ ನಿನಗೇ ಸಿಗುತ್ತದೆ ಎನ್ನುವ ಪ್ಲ್ಯಾನಾ ಎಂದೂ ಕಾಲೆಳೆದಿದ್ದಾರೆ.

https://twitter.com/SushantPeter302/status/1618047945601069058?ref_src=twsrc%5Etfw%7Ctwcamp%5Etweetembed%7Ctwterm%

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read