34 ವರ್ಷದ ಮಹಿಳೆ ಜೊತೆ 80 ವರ್ಷದ ವೃದ್ಧನ ಮದುವೆ; ಸೋಶಿಯಲ್ ಮೀಡಿಯಾ ಮೂಲಕ ಒಂದಾದ ಜೋಡಿ….!

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಮೂಲಕ ತನಗೆ ಪರಿಚಿತಳಾದ 34 ವರ್ಷದ ಮಹಿಳೆಯನ್ನು 80 ವರ್ಷದ ವೃದ್ಧ ಮದುವೆಯಾಗಿದ್ದಾರೆ. ಮಧ್ಯಪ್ರದೇಶದ ಮಾಲ್ವಾ ಜಿಲ್ಲೆಯಲ್ಲಿ ಈ ಮದುವೆ ನಡೆದಿದ್ದು, 80 ವರ್ಷದ ಬಾಲುರಾಮ್ ಹಾಗೂ ಮಹಾರಾಷ್ಟ್ರದ ಅಮರಾವತಿ ಮೂಲದ 34 ವರ್ಷದ ಶೀಲಾ ಸತಿ – ಪತಿಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೂಲತಃ ಮಧ್ಯಪ್ರದೇಶದ ಮಗರಿಯ ಗ್ರಾಮದ ಬಾಲುರಾಮ್ ಈಗಾಗಲೇ ಮದುವೆಯಾಗಿದ್ದು ಕೆಲ ವರ್ಷಗಳ ಹಿಂದೆ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈತನಿಗೆ ಓರ್ವ ಪುತ್ರ, ಮೂವರು ಪುತ್ರಿಯರಿದ್ದು ಅವರುಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತ್ನಿಯ ಸಾವು, ಅನಾರೋಗ್ಯದ ಕಾರಣಕ್ಕೆ ಬಾಲುರಾಮ್ ಖಿನ್ನತೆಗೆ ಒಳಗಾಗಿದ್ದರು.

ಇದೇ ಸಂದರ್ಭದಲ್ಲಿ ಅವರನ್ನು ಭೇಟಿಯಾದ ಸ್ನೇಹಿತ ವಿಷ್ಣು ಗುಜ್ಜರ್ ಎಂಬಾತ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಲು ಪ್ರೋತ್ಸಾಹಿಸಿದ್ದು, ಬಾಲುರಾಮ್ ತಮಾಷೆಯ ವಿಡಿಯೋಗಳಿಗೆ ಜನ ಫಿದಾ ಆಗಿದ್ದರು. ಅಲ್ಲದೆ ಇದರಿಂದಾಗಿ ಬಾಲುರಾಮ್ ಕೂಡ ಖಿನ್ನತೆಯಿಂದ ಹೊರ ಬಂದಿದ್ದರು.

ಕೆಲ ತಿಂಗಳುಗಳಲ್ಲಿಯೇ ಬಾಲು ರಾಮ್ ಅವರ ಇನ್ಸ್ಟಾಗ್ರಾಮ್ ಖಾತೆಗೆ ಸಾವಿರಾರು ಫಾಲೋವರ್ಸ್ ಗಳು ದೊರಕಿದ್ದರು. ಈ ಪೈಕಿ ಮಹಾರಾಷ್ಟ್ರದ ಅಮರಾವತಿಯ ಶೀಲಾ ಕೂಡ ಒಬ್ಬರು. ಬಾಲುರಾಮ್ ತಮಾಷೆಯ ವಿಡಿಯೋಗಳಿಗೆ ಮನಸೋತಿದ್ದ ಶೀಲಾ ಚಾಟ್ ಮಾಡಲು ಆರಂಭಿಸಿದ್ದರು.

ಇದರ ಪರಿಣಾಮ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಏಪ್ರಿಲ್ ಒಂದರಂದು ಮಧ್ಯಪ್ರದೇಶಕ್ಕೆ ಆಗಮಿಸಿದ ಶೀಲಾ ಸಸ್ನಾರ್ನಲ್ಲಿ ಬಾಲು ರಾಮ್ ಜೊತೆ ಕೋರ್ಟ್ ಮ್ಯಾರೇಜ್ ಮಾಡಿಕೊಂಡಿದ್ದು, ಬಳಿಕ ಇಬ್ಬರೂ ಕೂಡ ಹಿಂದೂ ಸಂಪ್ರದಾಯದಂತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಇವರಿಬ್ಬರ ಪ್ರೇಮ ವಿವಾಹದ ಸ್ಟೋರಿ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read