BIG NEWS: ಲೋಕಸಭೆ ಚುನಾವಣೆಗೆ ಸ್ವಾಮೀಜಿಗೆ ಬಿಜೆಪಿ ಟಿಕೆಟ್: ಪಕ್ಷದ ನಾಯಕರಿಂದ ಮಾದಾರ ಶ್ರೀ ಮನವೊಲಿಕೆ ಯತ್ನ

ಬೆಂಗಳೂರು: ಲೋಕಸಭೆ ಚುನಾವಣೆಗೆ ಮಾದಾರ ಚೆನ್ನಯ್ಯ ಗುರು ಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರನ್ನು ಕಣಕ್ಕಿಳಿಸಲು ಬಿಜೆಪಿ ಪ್ರಯತ್ನ ನಡೆಸಿದೆ.

ಚಿತ್ರದುರ್ಗ ಮೀಸಲು ವಿಧಾನಸಭಾ ಕ್ಷೇತ್ರದಿಂದ 2019 ರ ಚುನಾವಣೆಯಲ್ಲಿ ಶ್ರೀಗಳನ್ನು ಕಣಕ್ಕಿಳಿಸಲು ಸಂಘ ಪರಿವಾರ ಮತ್ತು ಬಿಜೆಪಿ ಚಿಂತನೆ ನಡೆಸಿತ್ತು. ಈಗ ಮತ್ತೊಮ್ಮೆ ಪ್ರಯತ್ನ ನಡೆಸಲಾಗಿದೆ. ದಲಿತ ಎಡಗೈ ಮತಗಳನ್ನು ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದ್ದು, ಸಂಘ ಪರಿವಾರದಿಂದಲೂ ಒಲವು ವ್ಯಕ್ತವಾಗಿದೆ. ಶ್ರೀಗಳ ಮನವೊಲಿಕೆಗೆ ಸತತ ಪ್ರಯತ್ನ ನಡೆಯುತ್ತಿದೆ. ಆದರೆ ಶ್ರೀಗಳು ಇನ್ನೂ ಒಪ್ಪಿಗೆ ನೀಡಿಲ್ಲವೆಂದು ಹೇಳಲಾಗಿದೆ.

ಸಂಘ ಪರಿವಾರದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಶ್ರೀಗಳು ಬಿಜೆಪಿಯ ಅಭ್ಯರ್ಥಿಯಾಗಿ ಚಿತ್ರದುರ್ಗದಿಂದ ಕಣಕ್ಕಿಳಿಯುವ ಕುರಿತು ಇನ್ನು ನಿರ್ಧಾರ ಕೈಗೊಂಡಿಲ್ಲ. ಆದರೆ, ಪಕ್ಷದ ನಾಯಕರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಶ್ರೀಗಳು ಪಕ್ಷದ ಅಭ್ಯರ್ಥಿಯಾದಲ್ಲಿ ಪರಿಶಿಷ್ಟ ಎಡಗೈ ಸಮುದಾಯದ ಮತದಾರರು ರಾಜ್ಯಾದ್ಯಂತ ಬೆಂಬಲಿಸುವ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read