ಬೈಕ್ ನಲ್ಲಿ ಹೋಗುತ್ತಿದ್ದ ನವವಿವಾಹಿತ ಜೋಡಿಗೆ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಜೈ ವರ್ಧನ್ ಸಿಂಗ್ ತಮ್ಮ ಕಾರಿನಲ್ಲಿ ಲಿಫ್ಟ್ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಾಹ್ನದ ಹೊತ್ತಿನಲ್ಲಿ ಬೈಕ್‌ನಲ್ಲಿ ಬಂದ ನವವಿವಾಹಿತರನ್ನು ನೋಡಿದ ನಂತರ ತಮ್ಮ ಫಾರ್ಚುನರ್ ಕಾರಿನಲ್ಲಿ ಅವರಿಗೆ ಲಿಫ್ಟ್ ನೀಡಿದ ಶಾಸಕ ಜೈವರ್ಧನ್ ಸಿಂಗ್ ಅವರ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಸ್ತುತ ಮಧ್ಯಪ್ರದೇಶದ ರಾಜ್‌ಗಢದಲ್ಲಿ ತನ್ನ ತಂದೆ ದಿಗ್ವಿಜಯ ಸಿಂಗ್ ಅವರ ಪರ ಪ್ರಚಾರದಲ್ಲಿ ನಿರತರಾಗಿದ್ದರು. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ವಾಪಸ್ಸಾಗ್ತಿದ್ದ ವೇಳೆ ದಾರಿಯಲ್ಲಿ ಸುಡು ಬಿಸಿಲಿನ ನಡುವೆ ದ್ವಿಚಕ್ರ ವಾಹನದಲ್ಲಿ ವಧು-ವರರು ಬರುತ್ತಿದ್ದನ್ನು ಕಂಡು ತಮ್ಮ ಚಾಲಕನಿಗೆ ಕಾರ್ ನಿಲ್ಲಿಸಲು ಹೇಳಿದ್ದಾರೆ. ಬಳಿಕ ನವ ದಂಪತಿಗೆ ತನ್ನ ಕಾರಿನಲ್ಲಿ ಮನೆಗೆ ಹೋಗಲು ಅವಕಾಶ ನೀಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
https://twitter.com/FreePressMP/status/1785623759644393913?ref_src=twsrc%5Etfw%7Ctwcamp%5Etweetembed%7Ctwterm%5E1785623759644393913%7Ctwgr%5E5e6195c325de3667b6a104cd3d59cf5a930d7113%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fmpcongressmlajaivardhansinghofferslifttonewlywedcoupleinhisfortunerheartwinningvideosurfaces-newsid-n604954592