ಸಂದೀಪ್ ರಾಜ್ ನಿರ್ದೇಶನದ ರೋಷನ್ ಕಣಕಾಲ ಅಭಿನಯದ ‘ಮೋಗ್ಲಿ’ ಚಿತ್ರದ ನಾಯಕಿ ಪಾತ್ರವನ್ನು ಪರಿಚಯಿಸಲಾಗಿದೆ. ಸಾಕ್ಷಿ ಮ್ಹಾಡೋಲ್ಕರ್ ಈ ಸಿನಿಮಾದಲ್ಲಿ ಜಾಸ್ಮಿನ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರ ತಂಡ ಅವರ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ಈ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ನಲ್ಲಿ ಟಿಜಿ ವಿಶ್ವ ಪ್ರಸಾದ್ ನಿರ್ಮಾಣ ಮಾಡುತ್ತಿದ್ದು, ಕಾಲಭೈರವ ಸಂಗೀತ ಸಂಯೋಜನೆ ನೀಡಿದ್ದಾರೆ.
ಪವನ್ ಕಲ್ಯಾಣ್ ಕೊಡತಿ ಸಂಕಲನ ಹಾಗೂ ರಾಮ ಮಾರುತಿ ಛಾಯಾಗ್ರಹಣವಿದೆ. ಇತ್ತೀಚಿಗಷ್ಟೇ ಪೂಜಾ ಸೆರೆಸೆರೆಮನಿ ಚಿತ್ರತಂಡ ಮುಹೂರ್ತ ಸಮಾರಂಭವನ್ನು ನೆರವೇರಿಸಿದೆ.