ವಾಹನ ಸವಾರರೇ ಗಮನಿಸಿ : ಇಂದು ಬೆಂಗಳೂರಿನ `ಇಸ್ಕಾನ್’ ಸುತ್ತಮುತ್ತ ವಾಹನ ಸಂಚಾರ ಬದಲು

ಬೆಂಗಳೂರು : ಶ್ರೀಕೃಷ್ಣ ಜನ್ಮಾಷ್ಟಾಮಿ ಪ್ರಯುಕ್ತ ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇಸ್ಕಾನ್ ದೇವಸ್ಥಾನಕ್ಕೆ ಸೆಪ್ಟೆಂಬರ್ 6 ರ ಇಂದು ಮತ್ತು ಸೆ.7 ರ ನಾಳೆ ಹೆಚ್ಚಿನ ಭಕ್ತರು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತಲ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಮಲ್ಲೇಶ್ವರಂ ಸಂಚಾರ ಪೊಲೀಸ್‌ ಠಾಣಾ ಸರಹದ್ದಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರು ಇಸ್ಕಾನ್ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು, ಗಣ್ಯ ವ್ಯಕ್ತಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವುದರಿಂದ ದಿನಾಂಕ:-06.09.2023 ಮತ್ತು ದಿ:07.09.2023 ರಂದು ಡಾ.ರಾಜ್‌ ಕುಮಾರ್ ರಸ್ತೆ ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ. ಬಸ್ಸುಗಳ ಸಂಚಾರವನ್ನು ನಿರ್ಬಂಧಿಸಿ ಈ ಕೆಳಕಂಡಂತೆ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ.

ಯಶವಂತಪುರ ಕಡೆಯಿಂದ – ಓರಾಯನ್ ಮಾಲ್ ಡಾ.ರಾಜ್ ಕುಮಾರ್ ರಸ್ತೆಯ ಮಾರ್ಗವಾಗಿ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ಕೆ.ಎಸ್‌.ಆರ್.ಟಿ.ಸಿ ಬಸ್ಸುಗಳು:-

ಮಾರಪ್ಪನಪಾಳ್ಯ – ಯಶವಂತಪುರ ಪ್ರಓವರ್ ಮಾರ್ಗವಾಗಿ – ಬಿ.ಹೆಚ್.ಇ.ಎಲ್ (ಕೆ-08) ಅಂಡರ್ ಪಾಸ್ ಮೂಲಕ – ಸರ್ಕಲ್‌ ಮಾರಮ್ಮ ಬಳಿ ಬಲ ತಿರುವು ಪಡೆದು – ಮಾರ್ಗೋಸ ರಸ್ತೆ ಮಲ್ಲೇಶ್ವರಂ ಮಾರ್ಗವಾಗಿ – ಕೆ.ಸಿ. ಜನರಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು – ಮಲ್ಲೇಶ್ವರಂ ಬ್ರಿಡ್ಜ್‌ ಅಂಡರ್ ಪಾಸ್ ಮೂಲಕ – ಲಿಂಕ್ ರಸ್ತೆಯಲ್ಲಿ ಸಂಚರಿಸಿ ಶೇಷಾದ್ರಿಪುರಂ ಮಾರ್ಗವಾಗಿ ಕೆಂಪೆಗೌಡ ಬಸ್‌ ನಿಲ್ದಾಣ (ಮೆಜೆಸ್ಟಿಕ್‌ ಕಡೆ) ಸಂಚರಿಸುವುದು.

ಯಶವಂತಪುರ ಕಡೆಯಿಂದ ವೆಸ್ಟ್ ಆಪ್ ಕಾರ್ಡ್ ರಸ್ತೆ-ಇಸ್ಕಾನ್ ದೇವಸ್ಥಾನ, ಮಹಾಲಕ್ಷ್ಮೀ ಲೇಔಟ್ ಎಂಟ್ರೆನ್ಸ್ ಮಾರ್ಗವಾಗಿ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಮಾಗಡಿ ರಸ್ತೆ, ವಿಜಯನಗರ ಕಡೆಗೆ ಸಂಚರಿಸುವ ಬಿ.ಎಂ.ಟಿ.ಸಿ. ಬಸ್ಸುಗಳು ಮತ್ತು ವಾಹನ ಸವಾರರು :-

ಯಶವಂತಪುರ ಕಡೆಯಿಂದ ಬಂದ ಬಿ.ಎಂ.ಟಿ.ಸಿ ಬಸ್ಸುಗಳು ಮತ್ತು ವಾಹನ ಸವಾರರು – ಜಿ.ಎಸ್.ಎಫ್ ಸರ್ಕಲ್ – ಓರಾಯನ್ ಮಾಲ್ ಮುಂಭಾಗ- ಡಾ.ರಾಜ್ ಕುಮಾರ್ ರಸ್ತೆಯ ಮೂಲಕ – ಡಾ.ರಾಜ್ ಕುಮಾರ್ ರಸ್ತೆ 10ನೇ ಕ್ಲಾಸ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು – ಡಯಕಾನ್ ಜಂಕ್ಷನ್ ಮಾರ್ಗವಾಗಿ – ರಾಜಾಜಿನಗರ 1ನೇ ಬ್ಲಾಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಂಚರಿಸಿ ಮಾಗಡಿ ರಸ್ತೆ, ವಿಜಯನಗರ ಕಡೆಗೆ ಸಂಚರಿಸುವುದು. ಈ ಮೇಲ್ಕಂಡಂತೆ ಮಾಡಲಾದ ಸಂಚಾರ ಮಾರ್ಪಾಡುಗಳಿಗೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಲಾಗಿದೆ.

Image

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read