ಕ್ರಿಕೆಟ್ ಆಟದ ಹುಚ್ಚು ಚಿಕ್ಕ ಮಕ್ಕಳನ್ನೂ ಬಿಟ್ಟಿಲ್ಲ ಎಂಬುದಕ್ಕೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಉತ್ತಮ ಉದಾಹರಣೆ. ತಾಯಿ ಕ್ರಿಕೆಟ್ ಆಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಬಾಲಕನೊಬ್ಬ ಮೆಟ್ಟಿಲುಗಳನ್ನು ಬಳಸದೆ ಬೇರೊಂದು ಮಾರ್ಗದಿಂದ ಕೆಳಗಿಳಿದು ಆಟಕ್ಕೆ ಹೋಗಿದ್ದಾನೆ!
ಏನಿದೆ ವಿಡಿಯೋದಲ್ಲಿ? ತನ್ನ ಮಗ ಕ್ರಿಕೆಟ್ ಆಡಲು ಹೋಗುವುದನ್ನು ತಾಯಿ ತಡೆದಿದ್ದಾರೆ. ಆದರೆ ಆಟದ ಹುಚ್ಚು ಹಿಡಿದಿದ್ದ ಈ ಬಾಲಕ ಮೆಟ್ಟಿಲುಗಳ ಮೂಲಕ ಹೋದರೆ ತಾಯಿಗೆ ಸಿಕ್ಕಿಬೀಳುತ್ತೇನೆ ಎಂದುಕೊಂಡು ಬೇರೆ ದಾರಿ ಹುಡುಕಿದ್ದಾನೆ. ತನ್ನ ಮನೆಯ ಚಾವಣಿಯಿಂದ ಪಕ್ಕದ ಚಾವಣಿಗಳಿಗೆ ಹಾರಿ, ಒಂದೊಂದಾಗಿ ಕೆಳಗಿಳಿದು ಕೊನೆಗೂ ಮೈದಾನ ತಲುಪಿದ್ದಾನೆ. ಅವನ ಈ ಧೈರ್ಯ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
‘ಘರ್ ಕೆ ಕಾಲೇಶ್’ (Ghar Ke Kalesh) ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 3.8 ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಮತ್ತು ಅನೇಕ ಕಾಮೆಂಟ್ಗಳನ್ನು ಪಡೆದುಕೊಂಡಿದೆ. ವೀಕ್ಷಕರು ಈ ವಿಡಿಯೋಗೆ ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಒಬ್ಬ ಬಳಕೆದಾರರು, “ಮುಂದೆ ಇವನ ಮೇಲೆ ಬಯೋಪಿಕ್ ನೋಡಬೇಕಾಗುತ್ತದೆಯೇನೋ” ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, “ಒಳ್ಳೆಯದು, ಕನಿಷ್ಠ ರೀಲ್ಸ್ ಮತ್ತು ಸಾಮಾಜಿಕ ಮಾಧ್ಯಮದ ಬಗ್ಗೆ ಗೀಳು ಇಲ್ಲ. ಕ್ರಿಕೆಟ್, ಗಾಳಿಪಟ ಹಾರಿಸುವುದು ಮತ್ತು ಇತರ ಹೊರಾಂಗಣ ಆಟಗಳು ಬಹಳ ಮುಖ್ಯ. ನಾನು ಇಡೀ ದಿನ ಗಾಳಿಪಟ ಹಾರಿಸುತ್ತಾ ಇದ್ದೆ” ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಮೂರನೆಯ ವೀಕ್ಷಕರೊಬ್ಬರು, “ಇವನು ಮುಂದಿನ ಜೀವನಕ್ಕೆ ಚೆನ್ನಾಗಿ ಪ್ರಾಕ್ಟಿಸ್ ಮಾಡಿದ್ದಾನೆ, ಇವನಿಗೆ ಯಾವುದೇ ತೊಂದರೆ ಆಗಲ್ಲ. ಈ ಹುಡುಗ ತುಂಬಾ ಮೆಚೂರ್ ಆಗುತ್ತಿದ್ದಾನೆ” ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ಕ್ರಿಕೆಟ್ ಮೇಲಿನ ಮಕ್ಕಳ ಪ್ರೀತಿಯನ್ನು ಎತ್ತಿ ತೋರಿಸುತ್ತದೆ ಮತ್ತು ಎಂತಹ ಸಂದರ್ಭದಲ್ಲೂ ಆಟ ಬಿಡಲು ಮನಸ್ಸು ಮಾಡದ ಅವರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತದೆ.
A mother stops her kid from playing a cricket match, so the kid avoids the staircase and finds a way from the rooftop to the ground😂
— Ghar Ke Kalesh (@gharkekalesh) July 12, 2025
pic.twitter.com/cm6EnHl7Bn