SHOCKING: ಮನೆಗೆ ನುಗ್ಗಿ ನವಜಾತ ಶಿಶು ಜೊತೆಗಿದ್ದ ಬಾಣಂತಿ ಮೇಲೆ ಗ್ಯಾಂಗ್ ರೇಪ್: ಹತ್ಯೆ

ಗುವಾಹಟಿ: ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ಒಂದು ತಿಂಗಳ ಮಗುವಿನ ತಾಯಿ ಮೇಲೆ ಅವರ ಮನೆಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಜಿಲ್ಲೆಯ ಪಸಾತಿಯಾ ಪ್ರದೇಶದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಈಗ ಮೃತ ನಿಕಿತಾ ದೇವಿ(25) ಅವರ ಪತಿ ದೂರ ಹೋಗಿದ್ದರು.

ಆಕೆ ತನ್ನ ನವಜಾತ ಶಿಶುವಿನೊಂದಿಗೆ ಮನೆಯಲ್ಲಿದ್ದಾಗ ಅಪರಿಚಿತ ದುಷ್ಕರ್ಮಿಗಳು ಬಾಗಿಲು ಮುರಿದು, ಆಕೆಯ ಮೇಲೆ ಅತ್ಯಾಚಾರ ಎಸಗಿ, ನಂತರ ಕತ್ತು ಹಿಸುಕಿ ಕೊಂದಿದ್ದಾರೆ.

ಆಕೆಯ ಪತಿ ಹತ್ತಿರದ ಚಿತ್ರಮಂದಿರದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಘಟನೆ ನಡೆದಾಗ ಅವರು ಮನೆಯಲ್ಲಿರಲಿಲ್ಲ.

ನಾನು ಈಗ ಒಂದು ವರ್ಷದಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾವ ಸಮಸ್ಯೆಯೂ ಇರಲಿಲ್ಲ, ಆಗಾಗ ಕೆಲವರು ತಡರಾತ್ರಿ ಸುತ್ತಮುತ್ತಲಲ್ಲಿ ಅಲೆದಾಡುವುದನ್ನು ನನ್ನ ಹೆಂಡತಿ ಗಮನಿಸಿದ್ದಳು. ಆದರೆ, ನಾನು ಅದರ ಬಗ್ಗೆ ಗಮನ ಹರಿಸಲಿಲ್ಲ. ಇಂದು ಬೆಳಿಗ್ಗೆ ಮನೆಗೆ ಬಂದಾಗ ಘಟನೆಯ ಬಗ್ಗೆ ನನಗೆ ತಿಳಿಯಿತು ಎಂದು ಪತಿ ತಿಳಿಸಿದ್ದಾನೆ.

ಅಷ್ಟರಲ್ಲಿ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ತನಿಖೆ ಪ್ರಾರಂಭಿಸಲಾಗಿದೆ, ನಾವು ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read