SHOCKING NEWS: ಹಾಡಹಗಲೇ ತಾಯಿಯಿಂದಲೇ ಮಗು ಕಿಡ್ನ್ಯಾಪ್

ಬೆಂಗಳೂರು: ತಾಯಿಯೊಬ್ಬಳು ತನ್ನದೇ ಮಗುವನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ ನಡೆದಿದೆ.

ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗಲು ಬಸ್ ಗಾಗಿ ಮನೆ ಮುಂದೆ ತಾತನ ಜೊತೆ ನಿಂತಿದ್ದ 6 ವರ್ಷದ ಬಾಲಕನನ್ನು ಹೆತ್ತ ತಾಯಿಯೇ ಕಿಡ್ನ್ಯಾಪ್ ಮಾಡಿದ್ದಾಳೆ. ಮಗುವಿನ ತಾಯಿ ಅನುಪಮ ಹಾಗೂ ಆಕೆಯ ಸ್ನೇಹಿತ ಇಬ್ಬರು ಈ ಕೃತ್ಯವೆಸಗಿದ್ದಾರೆ. ಮಗು ಅಪಹರಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಾಲಕ ತನ್ನ ತಾತನ ಜೊತೆ ಶಾಲೆ ಬಸ್ ಕಾಯುತ್ತ ಮನೆ ಮುಂದೆ ನಿಂತಿದ್ದ. ಸ್ಥಳದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಇತರ ಮಕ್ಕಳು ಸೇರಿದಂತೆ ಹಲವರು ನಿಂತಿದ್ದರು. ರಸ್ತೆ ದಾಟಿ ಬಂದ ಮಹಿಳೆಯೊಬ್ಬಳು ತಾತನನ್ನು ತಳ್ಳಿ ಮಗನನ್ನು ಎತ್ತಿಕೊಂಡು ಹೋಗಿದ್ದಾಳೆ.

ಅನುಪಮಾ ಹಾಗೂ ಸಿದ್ಧಾರ್ಥ್ 2014ರಲ್ಲಿ ವಿವಾಹವಾಗಿದ್ದರು. ದಂಪತಿಗೆ 6 ವರ್ಷದ ಮಗನಿದ್ದಾನೆ. ಕೌಟುಂಬಿಕ ಕಲಹದಿಂದಾಗಿ ದಂಪತಿ ಕೋರ್ಟ್ ಮೆಟ್ಟಿಲೇರಿದ್ದರು. ಅನುಪಮ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪವನ್ನು ಕೂಡ ಮಾಡಿದ್ದಾರೆ. ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ಮಧ್ಯೆ ಕೋರ್ಟ್ ಮಗುವನ್ನು ತಂದೆಯೇ ನೋಡಿಕೊಳ್ಳುವಂತೆ ಆದೇಶ ನೀಡಿತ್ತು. ಆದರೂ ಇಂದು ಬೆಳಿಗ್ಗೆ ಅನುಪಮಾ ಶಾಲೆಗೆ ತೆರಳಲು ಬಸ್ ಗೆ ಕಾಯುತಿದ್ದ ಮಗನನ್ನು ತಾನೇ ಕಿಡ್ನ್ಯಾಪ್ ಮಾಡಿ ಹೊತ್ತೊಯ್ದಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read