ಬಾಲಿವುಡ್ ರೆಟ್ರೋ ಹಾಡಿಗೆ ನೇಪಾಳ ಮೂಲದ ತಾಯಿ-ಮಗಳು ಸಖತ್ ಸ್ಟೆಪ್ಸ್; ವಿಡಿಯೋ ವೈರಲ್

ಇತ್ತೀಚೆಗೆ ರೀಲ್ಸ್ ಮಾಡುವುದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗಿದೆ. ಪುಟ್ಟ-ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಡಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನೀವು ನೋಡಿರಬಹುದು. ಇದರಲ್ಲಿ ಕೆಲವೊಂದು ವಿಡಿಯೋಗಳು ಭಾರಿ ವೈರಲ್ ಆಗುತ್ತವೆ. ಇದೀಗ ತಾಯಿ ಹಾಗೂ ಪುತ್ರಿಯೊಬ್ಬಳು ಮಾಡಿರುವ ಇತ್ತೀಚಿನ ಇನ್ಸ್ಟಾಗ್ರಾಂ ರೀಲ್ ಭಾರಿ ಸದ್ದು ಮಾಡುತ್ತಿದೆ.

ತಾಯಿ ಮತ್ತು ಮಗಳೊಬ್ಬಳು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ‘ಏಕ್ ಪರದೇಸಿ ಮೇರಾ ದಿಲ್ ಲೇ ಗಯಾ’ ರೆಟ್ರೊ ಬೀಟ್‌ಗೆ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ತಾಯಿ-ಮಗಳು ನೇಪಾಳ ಮೂಲದವರು ಎನ್ನಲಾಗಿದೆ. ಇಬ್ಬರೂ ಕೂಡ ಆಕರ್ಷಕವಾಗಿ ಮತ್ತು ಅದ್ಭುತವಾಗಿ ಭಾರತೀಯ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇವರು ಮಾಡಿರುವ ನೃತ್ಯ ಕಂಡು ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ. ಇವರ ಅಭಿನಯ ಖಂಡಿತಾ ನಿಮ್ಮ ಮನಗೆಲ್ಲುವುದರಲ್ಲಿ ಸಂಶಯವೇ ಇಲ್ಲ. ನೆಟ್ಟಿಗರು ತಾಯಿ-ಮಗಳ ನೃತ್ಯವನ್ನು ಮನಸಾರೆ ಮೆಚ್ಚಿ ಕೊಂಡಾಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ನೋಡಿದ ಬಳಕೆದಾರರು ಇಬ್ಬರ ನೃತ್ಯಕ್ಕೆ ಪ್ರೋತ್ಸಾಹಿಸಿದ್ದಾರೆ. ಈ ರೀತಿಯಾಗಿ ಪೋಷಕರು ಮಗುವಿನ ಪ್ರತಿಭೆಯನ್ನು ಬೆಂಬಲಿಸಬೇಕು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ತಿಂಗಳಾರಂಭದಲ್ಲಿ ಪೋಸ್ಟ್ ಮಾಡಲಾಗ ವಿಡಿಯೋ ಸಾವಿರಾರು ಲೈಕ್ಸ್ ಗಳನ್ನು ಗಳಿಸಿದ್ದು, ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೂರಾರು ಮಂದಿ ನೆಟ್ಟಿಗರು ತಾಯಿ-ಮಗಳ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read