ಈ ಪುಟ್ಟ ಬ್ಯಾಗ್‌ನ ಬೆಲೆ 2 ರೋಲ್ಸ್‌ ರಾಯ್ಸ್‌ ಕಾರಿಗಿಂತಲೂ ಅಧಿಕ, ಇದರಲ್ಲಿ ಅಂಥದ್ದೇನಿದೆ ಗೊತ್ತಾ…..?

ಸುಂದರವಾದ ಬ್ಯಾಗ್‌ಗಳೆಂದರೆ ಎಲ್ಲರಿಗೂ ಇಷ್ಟ. ಸಾವಿರಾರು ರೂಪಾಯಿಯ ಬ್ರಾಂಡೆಡ್‌ ಬ್ಯಾಗ್‌ಗಳ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಸೆಲೆಬ್ರಿಟಿಗಳು ಇಂತಹ ಬೆಲೆಬಾಳುವ ಬ್ಯಾಗ್‌ಗಳನ್ನು ಇಟ್ಟುಕೊಳ್ತಾರೆ. ಅವುಗಳ ಬೆಲೆ ಹೆಚ್ಚೆಂದರೆ 4-5 ಲಕ್ಷ ರೂಪಾಯಿವರೆಗೂ ಇರಬಹುದು. ಆದರೆ 14 ಕೋಟಿ ಮೌಲ್ಯದ ಬ್ಯಾಗ್ ಬಗ್ಗೆ ಕೇಳಿದ್ದೀರಾ? ಅಂತಹ ದುಬಾರಿ ಬ್ಯಾಗ್‌ ಒಂದು ಇಂಟರ್ನೆಟ್‌ನಲ್ಲಿ ಸಂಚಲನವನ್ನೇ ಮೂಡಿಸಿದೆ.

ಹರ್ಮ್ಸ್ ಕಂಪನಿಯು ಇತ್ತೀಚೆಗೆ ಈ ಬ್ಯಾಗ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 6,501,800 AED ಅಂದರೆ 17,70,257 ಡಾಲರ್. ಈ ಬೆಲೆಯನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಈ ಬ್ಯಾಗ್‌ನ ಬೆಲೆ ಅಂದಾಜು 14,71,39,903 ರೂಪಾಯಿ. ಅಂದರೆ 14 ಕೋಟಿ ರೂಪಾಯಿ.

ಈ ಬ್ಯಾಗ್ ಅನ್ನು ಚಿನ್ನ ಮತ್ತು ವಜ್ರದಿಂದ ಅಲಂಕರಿಸಲಾಗಿದೆ. ಈ ಚೀಲಕ್ಕೆ ನಟ ಗ್ರೇಸ್ ಕೆಲ್ಲಿ  ನಟ ಮತ್ತು ಮೊನೆಗಾಸ್ಕ್ ರಾಜಕುಮಾರಿಯ ಹೆಸರನ್ನು ಇಡಲಾಗಿದೆ. ಈ ಚೀಲದ ಗಾತ್ರ ಬಹಳ ಚಿಕ್ಕದು, ಬೆಲೆ ಆಕಾಶ ಮುಟ್ಟುತ್ತಿದೆ.

ಈ 14 ಕೋಟಿ ಬೆಲೆಬಾಳುವ ಬ್ಯಾಗ್‌ನ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗ್ತಿದೆ. ಪುಟ್ಟದೊಂದು ಬ್ಯಾಗ್‌ಗೆ ಅಷ್ಟೊಂದು ವ್ಯಯಿಸೋದು ಹಣ ವ್ಯರ್ಥ ಎನ್ನುತ್ತಿದ್ದಾರೆ ಮಧ್ಯಮ ವರ್ಗದ ಜನರು. ಆದರೆ ಬ್ಯಾಗ್‌ ಬಗ್ಗೆ ಕುತೂಹಲವಂತೂ ಇದ್ದೇ ಇದೆ.

ಗುಚಿ ಕಂಪನಿ ಕೂಡ ಇಂತಹ ದುಬಾರಿ ಬ್ಯಾಗ್‌ಗಳನ್ನು ಹೊಂದಿದೆ. ಗುಚಿಯಲ್ಲಿ 43 ಲಕ್ಷ ರೂಪಾಯಿ ಬೆಲೆಬಾಳುವ ಬ್ಯಾಗ್‌ ಲಭ್ಯವಿದೆ. ಇದಲ್ಲದೆ ಪ್ರಾಡಾ ಬ್ರಾಂಡ್‌ ಕೂಡ ಬಹಳ ಜನಪ್ರಿಯ. ಈ ಕಂಪನಿಯ ಬ್ಯಾಗ್‌ನ ಬೆಲೆ ಸುಮಾರು 9 ಲಕ್ಷ ರೂಪಾಯಿಯಷ್ಟಿದೆ. ಜನಸಾಮಾನ್ಯರು ಇದನ್ನು ಖರೀದಿಸುವುದು ಅಸಾಧ್ಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read