ಬೆಂಗಳೂರು : ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ಮಾಡಿ ಬಂಧನಕ್ಕೊಳಗಾದ ‘ಇನ್ಪೋಸಿಸ್’ ಟೆಕ್ಕಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈತನ ಮೊಬೈಲ್ ನಲ್ಲಿ 50 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಈತನ ಹೇಳಿಕೆಗೆ ಪೊಲೀಸರೇ ದಂಗಾಗಿದ್ದಾರೆ.
ವರದಿಯ ಪ್ರಕಾರ, ಪೊಲೀಸ್ ವಿಚಾರಣೆಯ ಸಮಯದಲ್ಲಿ ಆರೋಪಿಯು ಈ ವೀಡಿಯೊಗಳನ್ನು ನೋಡುವುದರಿಂದ “ತೃಪ್ತಿ ಸಿಗುತ್ತದೆ” ಎಂದು ಹೇಳಿದ್ದಾನೆ. ಇದಲ್ಲದೆ, ಅವನ ಮೊಬೈಲ್ ಫೋನ್ನಲ್ಲಿ ಸುಮಾರು 50 ಇತರ ಡೌನ್ಲೋಡ್ ಮಾಡಿದ ವೀಡಿಯೊಗಳು ಕಂಡುಬಂದಿವೆ.
ಮಹಾರಾಷ್ಟ್ರದ ಸಾಂಗ್ಲಿ ಮೂಲದ ಸ್ವಪ್ನಿಲ್ ನಾಗೇಶ್ ಮಾಲಿ ಇನ್ಪೋಸಿಸ್’ ನಲ್ಲಿ ಹಿರಿಯ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದನು. ಮಹಿಳಾ ಉದ್ಯೋಗಿಯೊಬ್ಬರು ಈತನನ್ನು ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ, ಮಾಲಿಯ ಫೋನ್ನಲ್ಲಿ ಮತ್ತೊಬ್ಬ ಮಹಿಳಾ ಉದ್ಯೋಗಿಯ ವೀಡಿಯೊವನ್ನು ಪೊಲೀಸರು ಕಂಡುಕೊಂಡರು.
ಈತ ರಹಸ್ಯವಾಗಿ ತನ್ನ ಮೊಬೈಲ್ನಲ್ಲಿ ಮಹಿಳಾ ಉದ್ಯೋಗಿಯ ಶೌಚಾಲಯದ ವಿಡಿಯೋ ರೆಕಾರ್ಡ್ ಮಾಡಿದ್ದ. ಪಕ್ಕದ ಶೌಚಾಲಯದ ಕಮೋಡ್ ಮೇಲೆ ನಿಂತು ರೆಕಾರ್ಡ್ ಮಾಡಿದ್ದಾನೆ. ಈತ ರೆಕಾರ್ಡ್ ಮಾಡುತ್ತಿರುವುದು ಎದುರುಗಡೆ ಡೋರ್ ಮೇಲೆ ಪ್ರತಿಬಿಂಬ ಮೂಡಿದೆ. ಮಹಿಳೆಯೊಬ್ಬರು ಕೂಡಲೇ ಹೊರ ಬಂದು ನೋಡಿದಾಗ ಯಾರೂ ಇರಲಿಲ್ಲ. ಮತ್ತೆ ಶೌಚಾಲಯದ ಒಳ ಹೋಗಿ ಆಕೆ ಪರಿಶೀಲನೆ ಮಾಡಿದ್ದಾರೆ. ಆಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಮಹಿಳೆ ಕಿರುಚಾಡಿದ್ದು, ಅಲ್ಲಿಯೇ ಮಹಿಳಾ ಉದ್ಯೋಗಿಯ ಕ್ಷಮೆ ಕೇಳಿದ್ದಾನೆ. ಈ ಹಂತದಲ್ಲಿ ಎಚ್ಆರ್ ಸಿಬ್ಬಂದಿ ಬಂದು ಪರಿಶೀಲನೆ ಮಾಡಿದ್ದು, ಸುಮಾರು 30ಕ್ಕೂ ಅಧಿಕ ಮಹಿಳೆಯರ ವಿಡಿಯೋ ಇದರಲ್ಲಿ ಪತ್ತೆಯಾಗಿದೆ.