ಹಾಲಿನ ಕ್ಯಾನ್‌ ನಲ್ಲಿ ಉಗುಳಿದ ವ್ಯಕ್ತಿ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | VIDEO

ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಹಾಲು ವಿತರಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕಂಟೈನರ್‌ಗೆ ಉಗುಳುತ್ತಿರುವುದನ್ನು ತೋರಿಸುವ ಶಾಕಿಂಗ್ ವೀಡಿಯೊ ಬಹಿರಂಗವಾಗಿದೆ.

ಪಕ್ಕದ ಮನೆಯೊಂದರ ಸಿಸಿ ಟಿವಿ ಕ್ಯಾಮೆರಾ ದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಆಲಂ ಎಂದು ಗುರುತಿಸಲಾದ ವ್ಯಕ್ತಿ, ಹಾಲು ತುಂಬಿದ ಪಾತ್ರೆಯಲ್ಲಿ ಉಗುಳುವುದು ಮತ್ತು ನಂತರ ಅದನ್ನು ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ರವಾನಿಸುವ ಸಂಪೂರ್ಣ ವೀಡಿಯೊ ಸೆರೆಯಾಗಿದೆ.

ಇದರ ವೀಡಿಯೊ ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ತಮ್ಮ ಆಕ್ರೋಶವನ್ನು ಆನ್‌ಲೈನ್‌ನಲ್ಲಿ ಹೊರಹಾಕಿದ್ದಾರೆ.

ಸ್ಥಳೀಯ ನಿವಾಸಿಗಳು ಹಾಲು ಪೂರೈಕೆದಾರನ ಈ ವರ್ತನೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಇದೀಗ ಅಧಿಕಾರಿಗಳು ಇಡೀ ವಿಷಯದ ಬಗ್ಗೆ ತನಿಖೆ ನಡೆಸಲು ನಿರ್ಧರಿಸಿದ್ದು, ಆಲಂ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಇತ್ತೀಚೆಗೆ ಬಾರಾಬಂಕಿಯಲ್ಲಿ ನಡೆದ ಘಟನೆಯೊಂದರ ಮತ್ತೊಂದು ವಿಡಿಯೋ ವೈರಲ್‌ ಆಗಿದ್ದರ ಬೆನ್ನಲ್ಲೇ ಈ ವಿಡಿಯೋ ಹೊರ ಬಿದ್ದಿದ್ದು, ಅದರಲ್ಲಿ ಉದ್ಯೋಗಿಯೊಬ್ಬರು ರಸ್ತೆಬದಿಯ ಹೋಟೆಲ್‌ನಲ್ಲಿ ರೊಟ್ಟಿಗಳ ಮೇಲೆ ಉಗುಳುವಾಗ ಸಿಕ್ಕಿಬಿದ್ದಿದ್ದರು.

https://twitter.com/ians_india/status/1851267256409272795?ref_src=twsrc%5Etfw%7Ctwcamp%5Etweetembed%7Ctwterm%5E1851267256409272795%7Ctwgr%5Eed8504a77e4befde86fc3738a9d23055d5a3afb8%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthedailyguardian-epaper-dhdb830fb1b4e24ee2a0258cab13ca58b2%2Fmoradabadsspitgateshockingcctvfootageshowsmanspittinginmilkcontainerwatch-newsid-n637141052

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read