ಕೇರಳದಲ್ಲಿ 2 ಮಂಕಿಪಾಕ್ಸ್ ಪ್ರಕರಣ ಪತ್ತೆ: ಯುಎಇನಿಂದ ಬಂದವರಲ್ಲಿ ಸೋಂಕು ದೃಢ

ತಿರುವನಂತಪುರಂ: ಕೇರಳದಲ್ಲಿ ಎರಡು ಮಂಗನ ಕಾಯಿಲೆ(ಎಂಪಾಕ್ಸ್) ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಬುಧವಾರ ಪ್ರಕಟಿಸಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಿಂದ ಇತ್ತೀಚೆಗೆ ಕೇರಳಕ್ಕೆ ಮರಳಿದ್ದ ಇಬ್ಬರು ವ್ಯಕ್ತಿಗಳಲ್ಲಿ ಎಂಪಾಕ್ಸ್ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ವಯನಾಡ್ ಜಿಲ್ಲೆಯ ಪುರುಷರಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ಆರಂಭದಲ್ಲಿ ಕಂಡುಬಂದಿದ್ದು, ಕಣ್ಣೂರಿನ ಎರಡನೇ ವ್ಯಕ್ತಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ.

ರೋಗಿಗಳ ಸಂಪರ್ಕಕ್ಕೆ ಬಂದವರಿಗೆ ಯಾವುದೇ ರೋಗಲಕ್ಷಣಗಳನ್ನು ಪತ್ತೆಹಚ್ಚಲು ಮತ್ತು ಅದರ ಪ್ರಕಾರ ವರದಿ ಮಾಡಲು ಸೂಚಿಸಲಾಗಿದೆ. ಈ ವರ್ಷ ರೋಗವು ಜಾಗತಿಕವಾಗಿ ಹರಡಿದ ನಂತರ ಸೆಪ್ಟೆಂಬರ್‌ನಲ್ಲಿ ಕೇರಳದಲ್ಲಿ ಮಂಗನ ಕಾಯಿಲೆಯ ಕೆಲವು ಪ್ರಕರಣಗಳು ವರದಿಯಾಗಿದ್ದವು,

ದೇಶದಲ್ಲಿ ಮಂಗನ ಕಾಯಿಲೆಯ ಯಾವುದೇ ಸಕ್ರಿಯ ಪ್ರಕರಣವಿಲ್ಲ ಎಂದು ಆರೋಗ್ಯ ಖಾತೆ ರಾಜ್ಯ ಸಚಿವ ಪ್ರತಾಪ್ ರಾವ್ ಜಾಧವ್ ಲೋಕಸಭೆಗೆ ತಿಳಿಸಿದ ಕೆಲವೇ ದಿನಗಳಲ್ಲಿ ಕೇರಳದಲ್ಲಿ ಪ್ರಕರಣ ವರದಿಯಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read