ಈ ಬಾರಿ ಚಳಿ ತುಸು ಜಾಸ್ತಿಯೇ ಇದೆ. ಈ ಹಿನ್ನೆಲೆಯಲ್ಲಿ ಸ್ವೆಟರ್, ಕ್ಯಾಪ್ ಹಾಗೂ ಬೆಚ್ಚಗಿನ ಬಟ್ಟೆಗಳ ವ್ಯಾಪಾರ ಭರ್ಜರಿಯಾಗಿ ಸಾಗುತ್ತದೆ. ಇಂಥದ್ದರಲ್ಲಿ ಮಂಕಿ ಕ್ಯಾಪ್ಗೂ ಬೇಡಿಕೆ ಹೆಚ್ಚಿದೆ. ಆದರೆ ಇಲ್ಲೊಂದು ಮಂಕಿ ಕ್ಯಾಪ್ ಮಾತ್ರ ಜನರನ್ನು ಬೆಚ್ಚಿ ಬೀಳಿಸಿದೆ.
ಟ್ವಿಟರ್ನಲ್ಲಿ ವೈರಲ್ ಆಗಿರುವ ಒಂದು ಮಂಕಿ ಕ್ಯಾಪ್ ಬೆಲೆ ನೋಡಿ ನೆಟ್ಟಿಗರು ಹೌಹಾರಿದ್ದಾರೆ. ಏಕೆಂದರೆ ಇದರ ಬೆಲೆ 31,990 ರೂ. ಡೊಲ್ಸ್ & ಗಬ್ಬಾನಾ ಖಾಕಿ ಸ್ಕೀ ಮಾಸ್ಕ್ ಕ್ಯಾಪ್‌ನ ಉತ್ಪನ್ನದ ಬೆಲೆಯನ್ನು ತೋರಿಸುವ ಚಿತ್ರವು ವೈರಲ್ ಆಗಿದೆ. ಇದರ ಮೂಲ ಬೆಲೆ 40 ಸಾವಿರ ರೂಪಾಯಿ, ರಿಯಾಯಿತಿ ಬಳಿಕ 31,990 ರೂಪಾಯಿ ಎಂದು ತೋರಿಸಲಾಗಿದೆ. ಮಂಕಿ ಕ್ಯಾಪ್ ಜೊತೆ ಮಾಸ್ಕ್ ಕೂಡ ಇದರಲ್ಲಿ ಸೇರಿದೆ.
ಇದು 50 ರೂಪಾಯಿಗಿಂತ ಹೆಚ್ಚಿಗೆ ಬೆಲೆ ಬಾಳುವುದಿಲ್ಲ ಎಂದು ಹಲವರು ಹೇಳಿದ್ದರೆ, ಈ ಬೆಲೆ ನೋಡಿ ಥರಹೇವಾರಿ ಕಮೆಂಟ್ಸ್ಗಳು ಬರುತ್ತಿವೆ.
As a Bengali, I am horrified and vindicated. pic.twitter.com/fu8Wn5ToPa
— Swati Moitra (@swatiatrest) January 17, 2023