ವ್ಯಾಲೆಂಟೈನ್ಸ್ ಡೇ ದಿನ ಕಿಸ್, ಬಟ್ಟೆಗಿಂತ ʻಇದನ್ನುʼಕೇಳಿದ್ದಾರೆ ಬಹುತೇಕ ಜನ……!

ಪ್ರೇಮಿಗಳ ದಿನಕ್ಕೆ ಇನ್ನು ಒಂದೇ ದಿನ ಬಾಕಿ ಇದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಲಾಗುವುದು. ಭಾರತದಲ್ಲಿ ಪ್ರೇಮಿಗಳು ಪರಸ್ಪರ ಬಟ್ಟೆ, ಹೂ, ಚಾಕೋಲೇಟ್‌, ಗ್ಯಾಜೆಟ್‌, ಮನೆ ವಸ್ತು ಸೇರಿದಂತೆ ಅನೇಕ ರೀತಿಯ ವಸ್ತುಗಳನ್ನು ನೀಡಿ ವ್ಯಾಲಂಟೈನ್ಸ್‌ ಡೇ ಆಚರಣೆ ಮಾಡುತ್ತಾರೆ. ಆದ್ರೆ ಎಲ್ಲ ದೇಶದಲ್ಲೂ ಬರೀ ವಸ್ತುಗಳೇ ಉಡುಗೊರೆಯಾಗಿ ಸಿಗಬೇಕು ಎಂದೇನಿಲ್ಲ. ಹಣವನ್ನು ಕೂಡ ಉಡುಗೊರೆ ರೂಪದಲ್ಲಿ ನೀವು ದೇಶವಿದೆ. ಯಸ್.‌ ನಾವು ಫಿಲಿಪೈನ್ಸ್‌ ಬಗ್ಗೆ ಹೇಳ್ತಿದ್ದೇವೆ.

ಪ್ರೇಮಿಗಳ ದಿನಕ್ಕೂ ಮುನ್ನ ಅಲ್ಲೊಂದು ಸಮೀಕ್ಷೆ ನಡೆದಿದೆ. ಸಮೀಕ್ಷೆಯಲ್ಲಿ ಬೇರೆ ಬೇರೆ ರಾಜ್ಯದ  1,200 ಜನರು ಪಾಲ್ಗೊಂಡಿದ್ದರು. ಈ ವೇಳೆ ವ್ಯಾಲಂಟೈನ್ಸ್‌ ಡೇ ಸಮಯದಲ್ಲಿ ಯಾವ ಉಡುಗೊರೆ ಬಯಸ್ತೀರಿ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಅನೇಕರು ನೀಡಿದ ಉತ್ತರ ಹಣ. ‌ ಫಿಲಿಪೈನ್ಸ್‌ನ ಸಾಮಾಜಿಕ ಹವಾಮಾನ ಕೇಂದ್ರ ಸಮೀಕ್ಷೆ ನಡೆಸಿದ್ದು, ಎಷ್ಟು ಮಂದಿ ಯಾವ ಉಡುಗೊರೆ ಬಯಸಿದ್ದಾರೆ ಎಂಬುದನ್ನು ಅದು ಅಂಕಿ ಮೂಲಕ ವಿವರಿಸಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 16ರಷ್ಟು ಮಂದಿ ಹಣ ನಿರೀಕ್ಷೆ ಮಾಡಿದ್ರೆ ಶೇಕಡಾ 11 ಮಂದಿ ಪ್ರೀತಿ ಒಡನಾಟ ಎಂದಿದ್ದಾರೆ. ಶೇಕಡಾ 10 ಮಂದಿ ಹೂವಾದ್ರೆ ಶೇಕಡಾ 9 ಮಂದಿ ಬಟ್ಟೆ ಆಯ್ಕೆ ಮಾಡಿದ್ದಾರೆ.

ಬೈಕ್‌, ವಾಹನ, ಗ್ರೀಟಿಂಗ್‌ ಕಾರ್ಡ್‌, ಕಿಸ್‌ ಕೇಳಿದವರ ಸಂಖ್ಯೆ ಶೇಕಡಾ ಒಂದಷ್ಟಿದೆ. ಸಮೀಕ್ಷೆಯಲ್ಲಿ ಇನ್ನೂ ಅನೇಕ ವಿಷ್ಯವನ್ನು ತಿಳಿಯುವ ಪ್ರಯತ್ನ ನಡೆಸಲಾಗಿದೆ. ಯಾರು ಖುಷಿಯಾಗಿದ್ದಾರೆ ಎಂಬುದನ್ನೂ ಇದ್ರಲ್ಲಿ ಪತ್ತೆ ಮಾಡಲಾಗಿದೆ. ಸಮೀಕ್ಷೆ ಪ್ರಕಾರ, ಮದುವೆಯಾದ ಶೇಕಡಾ 76ರಷ್ಟು ಪುರುಷರು ಖುಷಿಯಾಗಿದ್ರೆ ಮಹಿಳೆಯರ ಸಂಖ್ಯೆ ಶೇಕಡಾ 67ರಷ್ಟಿದೆ. ಉಡುಗೊರೆ ರೂಪದಲ್ಲಿ ಹಣ ಕೇಳಿದವರಲ್ಲಿ ಮಹಿಳೆಯರು ಮುಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read