ಸಂಕಷ್ಟಕ್ಕೆ ಸಿಲುಕಿದ್ರಾ ಮಹಾಕುಂಭದ ಮೊನಾಲಿಸಾ ? ನಿರ್ಮಾಪಕನಿಂದ ಸ್ಪೋಟಕ ಸಂಗತಿ ಬಹಿರಂಗ

ಮಹಾಕುಂಭದಲ್ಲಿ ಕಂಗೊಳಿಸಿದ ಮೊನಾಲಿಸಾ ಇದೀಗ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಇದೀಗ ವಿವಾದದಲ್ಲೂ ಸಿಲುಕಿದ್ದಾರೆ. ‘ದಿ ಡೈರಿ ಆಫ್ ಮಣಿಪುರ್’ ನಿರ್ದೇಶಕ ಸನೋಜ್ ಮಿಶ್ರಾ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ. ಮೊನಾಲಿಸಾ ಇದೀಗ ಒಂದು ರೀತಿಯ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬಂಗಾಳ ಡೈರಿ, ರಾಮ್ ಕಿ ಜನ್ಮಭೂಮಿ ಮತ್ತು ಕಾಶಿ ಟು ಕಾಶ್ಮೀರ ಸಿನಿಮಾಗಳ ನಿರ್ಮಾಪಕ ಜಿತೇಂದ್ರ ನಾರಾಯಣ್ ಸೇಂಗರ್ ಅಲಿಯಾಸ್ ವಾಸಿಂ ರುಜ್ವಿ, ಸನೋಜ್ ಮಿಶ್ರಾ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸನೋಜ್ ಮಿಶ್ರಾ ಮದ್ಯದ ನಶೆಯಲ್ಲಿರುತ್ತಾನೆ ಮತ್ತು ಸಿನಿಮಾ ಸೆಟ್‌ಗಳಲ್ಲಿಯೂ ಮದ್ಯಪಾನ ಮಾಡುತ್ತಾನೆ ಎಂದು ಅವರು ಹೇಳಿದ್ದು, ಮದ್ಯಪಾನ ಮಾಡಿದ ನಂತರ ಅವನಿಗೆ ಯುವತಿಯರು ಬೇಕಾಗುತ್ತಾರೆ ಎಂದು ಆರೋಪಿಸಿದ್ದಾರೆ.

ಸನೋಜ್ ಮಿಶ್ರಾ ಹಲವು ಸಿನಿಮಾಗಳನ್ನು ನಿರ್ಮಿಸುವ ಬಗ್ಗೆ ಹೇಳಿಕೊಂಡಿದ್ದರು, ಆದರೆ ಅವರ ಒಂದು ಸಿನಿಮಾ ಕೂಡ ಬಿಡುಗಡೆಯಾಗಿಲ್ಲ ಮತ್ತು ಯಾವುದೇ ಗಳಿಕೆಯನ್ನು ಹೊಂದಿಲ್ಲ ಎಂದು ಜಿತೇಂದ್ರ ನಾರಾಯಣ್ ಸೇಂಗರ್ ಹೇಳಿದ್ದಾರೆ. ಮೊನಾಲಿಸಾ ಅವರ ಕುಟುಂಬವು ತುಂಬಾ ಮುಗ್ಧವಾಗಿದೆ ಎಂದು ಅವರು ಹೇಳಿದ್ದು, ಸೀತಾಪುರದಲ್ಲಿ ನಮ್ಮ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು, ಅಲ್ಲಿ ಸನೋಜ್ ಮಿಶ್ರಾ ಸೆಟ್‌ನಲ್ಲಿ ಮದ್ಯಪಾನ ಮಾಡಲು ಪ್ರಾರಂಭಿಸಿದರು ಮತ್ತು ಅಲ್ಲಿ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಜಿತೇಂದ್ರ ನಾರಾಯಣ್ ಸೇಂಗರ್ ತಿಳಿಸಿದ್ದಾರೆ.

ಮಧ್ಯಪ್ರದೇಶದವರಾದ ಮೋನಾಲಿಸಾ ಮಹಾಕುಂಭದಲ್ಲಿ ತಮ್ಮ ಕಣ್ಣುಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದರು. ಮಹಾಕುಂಭದಲ್ಲಿ ಜನರು ಅವರ ಫೋಟೋ ಮತ್ತು ವಿಡಿಯೋಗಳನ್ನು ಮಾಡಲು ಪ್ರಾರಂಭಿಸುವಷ್ಟು ವೈರಲ್ ಆದರು. ಇದರಿಂದ ಬೇಸತ್ತ ಮೊನಾಲಿಸಾ ಮಹಾಕುಂಭವನ್ನು ತೊರೆದಿದ್ದು, ಇದರ ನಂತರ ನಿರ್ದೇಶಕ ಸನೋಜ್ ಮಿಶ್ರಾ ಅವರ ಮನೆಗೆ ತೆರಳಿ ಅವರಿಗೆ ಸಿನಿಮಾ ಅವಕಾಶ ನೀಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read