ದಾನ ಮಾಡುವ ಹಲವು ಮಂದಿ ಇದ್ದಾರೆ. ಕೆಲವರು ಎಷ್ಟೇ ಉಪಕಾರ ಮಾಡಿದರೂ ಅದನ್ನು ಯಾರಿಗೂ ಹೇಳದೇ ತಮ್ಮ ಕಾರ್ಯವನ್ನು ಮುಂದುವರೆಸಿದರೆ, ಈಗಿನ ಹೆಚ್ಚು ಮಂದಿ ತಾವು ಮಾಡುತ್ತಿರುವ ಉಪಕಾರ ನಾಲ್ಕು ಜನರಿಗೆ ತಿಳಿಯಲಿ ಎನ್ನುವ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಅಂಥದ್ದೇ ಒಂದು ಪೋಸ್ಟ್ ಈಗ ವೈರಲ್ ಆಗಿದೆ.
ತಮ್ಮ ಮಗನ ಸ್ನೇಹಿತನೊಬ್ಬ ಊಟ ಮಾಡದೇ ಬರುತ್ತಿದ್ದ ಕಾರಣ, ತಮ್ಮ ಮಗ ತನ್ನ ಊಟವನ್ನೇ ಆತನಿಗೆ ನೀಡುತ್ತಿದ್ದುದನ್ನು ನೋಡಿದ ತಾಯಿಯೊಬ್ಬಳು ಈಗ ಇಬ್ಬರಿಗೂ ಊಟ ಕಳುಹಿಸುವ ಪೋಸ್ಟ್ ಇದಾಗಿದೆ.
“ನನ್ನ ಮಗ ಕಾಲೇಜಿನಲ್ಲಿ ಯುವಕನೊಂದಿಗೆ ಸ್ನೇಹ ಬೆಳೆಸಿದನು, ಆದರೆ ಕಳೆದ ಕೆಲವು ವಾರಗಳಲ್ಲಿ ಆ ಸ್ನೇಹಿತ ಏನನ್ನೂ ತಿನ್ನುತ್ತಿಲ್ಲ ಎಂದು ಗಮನಿಸಿದನು. ಅದಕ್ಕಾಗಿ ಮಗ ಆತನೊಟ್ಟಿಗೆ ತನ್ನ ಊಟವನ್ನು ಹಂಚಿಕೊಳ್ಳಲು ಪ್ರಾರಂಭಿಸಿದನು. ಇದನ್ನು ತಿಳಿದ ನಾನು ಈಗ 2 ಪ್ಯಾಕ್ ಮಾಡಿದ ಊಟವನ್ನು ತಯಾರಿಸುತ್ತೇನೆ. ಈಗ ಇಬ್ಬರೂ ಸಂಪೂರ್ಣ ಖುಷಿಯಿಂದ ಊಟ ಮಾಡುತ್ತಿದ್ದಾರೆ ಎಂದು ಈ ತಾಯಿ ಬರೆದುಕೊಂಡಿದ್ದಾರೆ. ಜೊತೆಗೆ ಸ್ಯಾಂಡ್ವಿಚ್ ಚಿತ್ರವನ್ನೂ ಶೇರ್ ಮಾಡಿದ್ದಾರೆ.
ಹಲವರು ಈ ಕಾರ್ಯವನ್ನು ಶ್ಲಾಘಿಸಿದರೆ, ಇನ್ನು ಕೆಲವರು ಇಂಥ ವಿಷಯಗಳನ್ನು ಜಗಜ್ಜಾಹೀರ ಮಾಡುವ ಬದಲು ಮಾಡುವ ಸತ್ಕಾರ್ಯವನ್ನು ನಿಮ್ಮ ಬಳಿಯೇ ಇಟ್ಟುಕೊಂಡರೆ ಒಳ್ಳೆಯದು. ಇಲ್ಲದಿದ್ದರೆ ಪ್ರಚಾರಕ್ಕಾಗಿ ಸಹಾಯ ಮಾಡಿದಂತೆ ಭಾಸವಾಗುತ್ತದೆ ಎಂದಿದ್ದಾರೆ.
https://twitter.com/flaminhaystacks/status/1639190726444724225?ref_src=twsrc%5Etfw%7Ctwcamp%5Etweetembed%7Ctwterm%5E1639473201221705728%7Ctwgr%5E2e8f36bc2c5aaaecba0bca9c4847e8fc9fb61f15%7Ctwcon%5Es2_&ref_url=https%3A%2F%2Fwww.hindustantimes.com%2Ftrending%2Fmoms-gesture-towards-son-s-starving-classmate-wins-hearts-101679724814070.html