ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಬಳಿ ಇದ್ದ ಆನೆ ದಂತದ ಬಗ್ಗೆ ಸರ್ಕಾರ ನೀಡಿದ್ದ ಅನುಮತಿಯನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ.
ಮೋಹನ್ ಲಾಲ್ ಬಳಿ ಇರುವ ಆನೆದಂತದಿಂದ ತಯಾರಿಸಿದ ವಸ್ತುಗಳಿಗೆ ಅರಣ್ಯ ಇಲಾಖೆ ನೀಡಿದ್ದ ಮಾಲೀಕತ್ವ ಪ್ರಮಾಣಪತ್ರಗಳು ಅಮಾನ್ಯ ಮತ್ತು ಇವುಗಳನ್ನು ಕನೂನುಬದ್ಧಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಒಂದು ವೇಳೆ ದಂತದ ವಸ್ತುಗಳನ್ನು ಉಳಿಸಿಕೊಳ್ಳಲು ನಟನಿಗೆ ಅವಕಾಶ ಕಲ್ಪಿಸಲು ಸರ್ಕಾರ ಬಯಸಿದರೆ ವನ್ಯಜೀವಿ (ರಕ್ಷಣೆ) ಕಾಯ್ದೆ 1972ರ ಸೆಕ್ಷನ್ ಅಡಿಯಲ್ಲಿ ಹೊಸ ಅಧಿಸೂಚನೆಯನ್ನು ಹೊರಡಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ತಿಳಿಸಿದೆ.
ತಮ್ಮ ಬಳಿ ಇರುವ ಎರಡು ಆನೆದಂತಗಳು ಹಾಗೂ ಆನೆದಂತದಿಂದ ತಯಾರಿಸಿರುವ 13 ವಸ್ತುಗಳನ್ನು ಸೆಕ್ಷನ್ 40(4)ರ ಅಡಿಯಲ್ಲಿ ಮುಖ್ಯ ವನ್ಯಜೀವಿ ವಾರ್ಡನ್ ಎದುರು ಹಾಜರುಪಡಿಸಿ ನಂತರ ಸೆಕ್ಷನ್ 42ರ ಅಡಿಯಲ್ಲಿ ಅದಕ್ಕೆ ಅನುಮತಿ ಪಡೆದಿರುವುದನ್ನು ಪ್ರಶ್ನಿಸಿ ಕೊಚ್ಚಿಯ ಎಲೂರಿನ ಕೆ.ಎ.ಪೌಲೋಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೀಟ ನಡೆಸಿತು.
