ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚಿನ ವಾರಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಫೋನ್‌ನಲ್ಲಿ ಮಾತನಾಡಲು ಕನಿಷ್ಠ ನಾಲ್ಕು ಬಾರಿ ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಮೋದಿ ಅವರು ಟ್ರಂಪ್ ಜತೆಗೆ ಮಾತನಾಡಲು ನಿರಾಕರಿಸಿದ್ದಾರೆ ಎಂದು ಜರ್ಮನ್ ಪತ್ರಿಕೆ ಫ್ರಾಂಕ್‌ಫರ್ಟರ್ ಆಲ್ಗೆಮೈನ್ ವರದಿ ಮಾಡಿದೆ.
ಮೈಂಜ್ ಮೂಲದ ದಾಖಲೆಯ ಪತ್ರಿಕೆ ಇದು “ಅವರ(ಮೋದಿ) ಕೋಪದ ಜೊತೆಗೆ ಅವರ ಎಚ್ಚರಿಕೆಯ” ಪರಿಣಾಮವಾಗಿದೆ ಎಂದು ಸೂಚಿಸುತ್ತದೆ ಎಂದಿದೆ.
ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಿದ್ದಕ್ಕೆ ಟ್ರಂಪ್ ಭಾರತಕ್ಕೆ ಸುಂಕ ವಿಧಿಸಿದ್ದರಿಂದ 25 ವರ್ಷಗಳಿಂದ ಬೆಳೆಸಲಾಗಿದ್ದ ಭಾರತ-ಅಮೆರಿಕ ಸಂಬಂಧಗಳಲ್ಲಿ ಬಿಕ್ಕಟ್ಟು ಉಂಟಾಗಿದೆ.
ಅಧ್ಯಕ್ಷ ಟ್ರಂಪ್ ಅವರ ಆಡಳಿತವು ಭಾರತಕ್ಕೆ 50% ಸುಂಕಗಳನ್ನು ವಿಧಿಸಿದಾಗಲೂ ಅವರು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದು, ಇದಕ್ಕೆ ಮೋದಿ ನಿರಾಕರಿಸಿದ್ದಾರೆ.,
ಟ್ರಂಪ್ ಇತ್ತೀಚಿನ ವಾರಗಳಲ್ಲಿ ನಾಲ್ಕು ಬಾರಿ ಮೋದಿಗೆ ಕರೆ ಮಾಡಲು ಪ್ರಯತ್ನಿಸಿದರು. ಆದರೆ, ಮೋದಿ ಕರೆಗಳನ್ನು ನಿರಾಕರಿಸಿದರು ಎಂದು FAZ ಹೇಳಿಕೊಂಡಿದೆ” ಎಂದು ಬರ್ಲಿನ್ ಮೂಲದ ಗ್ಲೋಬಲ್ ಪಬ್ಲಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಥಾರ್ಸ್ಟನ್ ಬೆನ್ನರ್ X ನಲ್ಲಿ ಪತ್ರಿಕೆ ವರದಿಯ ಪ್ರತಿಯನ್ನು ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. FAZ ಎಂದರೆ ಫ್ರಾಂಕ್‌ಫರ್ಟರ್ ಆಲ್ಗೆಮೈನ್ ಜೈಟಂಗ್. ಜೈಟಂಗ್ ಎಂದರೆ ಜರ್ಮನ್ ಭಾಷೆಯಲ್ಲಿ ಪತ್ರಿಕೆ.