ನಿರುದ್ಯೋಗಿಗಳಿಗೆ ಕೇಂದ್ರದಿಂದ 6 ಸಾವಿರ ರೂ. ಕೊಡ್ತಿರೋದು ನಿಜನಾ ? ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಅಸಲಿ ಸತ್ಯ

ನವದೆಹಲಿ: ಪ್ರಧಾನ ಮಂತ್ರಿ ಬೇರೋಜ್‌ಗಾರಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಕೇಂದ್ರ ಸರಕಾರದಿಂದ ಹಣಕಾಸು ನೆರವು ನೀಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಸಂದೇಶವೊಂದು ಹರಿದಾಡುತ್ತಿದೆ.

ನಿರುದ್ಯೋಗಿ ಯುವಕರಿಗೆ ಕೇಂದ್ರ ಸರಕಾರ ಮಾಸಿಕ 6 ಸಾವಿರ ರೂ. ಭತ್ಯೆ ನೀಡುತ್ತಿದೆ ಎಂದು ಸಂದೇಶದಲ್ಲಿ ಹೇಳಲಾಗಿದೆ. ಅಂತಹ ನಿರುದ್ಯೋಗಿ ಯುವಕರು ಯೋಜನೆಯ ಲಾಭ ಪಡೆಯಲು ನಿರ್ದಿಷ್ಟ ಲಿಂಕ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಅದು ಹೇಳುತ್ತದೆ. ನಿರುದ್ಯೋಗಿ ಯುವಕರು ತಮ್ಮ ಮೊಬೈಲ್ ಮೂಲಕ ಲಿಂಕ್ ಅನ್ನು ಪ್ರವೇಶಿಸಬಹುದು ಮತ್ತು ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಬಹುದು ಎಂದು ಅದು ಸೇರಿಸುತ್ತದೆ.

ಆದರೆ ಇಂಥ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ. ಜನರು ಮೋಸ ಹೋಗಬಾರದು. ಯಾವುದೋ ಲಿಂಕ್​ ಕ್ಲಿಕ್​ ಮಾಡಿ ಸೈಬರ್​ ವಂಚನೆಗೆ ಒಳಗಾಗಬಾರದು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶ ಸಂಪೂರ್ಣ ಸುಳ್ಳು. ಭಾರತ ಸರ್ಕಾರವು ಅಂತಹ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ. ದಯವಿಟ್ಟು ಈ ಸಂದೇಶಗಳು ಬಂದರೆ ಫಾರ್ವರ್ಡ್ ಮಾಡಬೇಡಿ ಎಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read