VIRAL VIDEO : ‘ಮೋದಿ’ ಪ್ರಮಾಣ ವಚನದ ವೇಳೆ ಕಾಣಿಸಿಕೊಂಡಿದ್ದು ಚಿರತೆಯಲ್ಲ, ಬೆಕ್ಕು’ : ಪೊಲೀಸರ ಸ್ಪಷ್ಟನೆ

ನವದೆಹಲಿ : ನರೇಂದ್ರ ಮೋದಿ ಅವರು ಜೂನ್ 9 ರಂದು ಭಾರತದ ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದರು.ಜೂನ್ 9 ರಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿಗೂಢ ಪ್ರಾಣಿಯೊಂದು ಓಡಾಡಿದೆ ಎಂಬ ಚರ್ಚೆ ಶುರುವಾಗಿತ್ತು.

ಈ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದು, ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಓಡಾಡಿದ್ದು ಚಿರತೆಯಲ್ಲ ಬೆಕ್ಕು ಎಂದು ಸ್ಪಷ್ಟನೆ ನೀಡಿದ್ದಾರೆ. ಅದು ಚಿರತೆಯೇ? ಬೆಕ್ಕೇ? ಅಥವಾ ನಾಯಿ? ರಾಷ್ಟ್ರಪತಿ ಭವನದ ಯಾವ ಪ್ರಾಣಿ ಆಕಸ್ಮಿಕವಾಗಿ ಅಡ್ಡಾಡುತ್ತಿದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಪೊಲೀಸರು ಇದು ಯಾವುದೇ ಚಿರತೆ ಅಲ್ಲ ಅಲ್ಲಿ ಸಾಮಾನ್ಯವಾದ ಬೆಕ್ಕು ಓಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

https://twitter.com/i/status/1800022871248687341

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read