ಹೈದರಾಬಾದ್: ಎಂಎಲ್ ಸಿ ಮಲ್ಲಣ್ಣ ಅವರ ಗನ್ ಮ್ಯಾನ್ ಬಿಆರ್ ಎಸ್ ಕಾರ್ಯಕರ್ತರ ಮೇಲೆ ಓಪನ್ ಫೈರಿಂಗ್ ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಪುತ್ರಿ ಕೆ.ಕವಿತಾ ಬಗ್ಗೆ ಎಂಎಲ್ ಸಿ ಮಲ್ಲಣ್ಣ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ಬಿಆರ್ ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ತೀವ್ರಸ್ವರೂಪ ಪಡೆದಿದ್ದು, ಬಿಆರ್ ಎಸ್ ಕಾರ್ಯಕರ್ತರು ಎಂಎಲ್ ಸಿ ಮಲ್ಲಣ್ಣ ಅವರ ಕಚೇರಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಚೇರಿ ಬಾಗಿಲು ತಳ್ಳಿ ಪೀಠೋಪಕರಣಗಳನ್ನು ಹಾನಿ ಮಾಡಿದ್ದಾರೆ. ಈ ವೇಳೆ ಎಂಎಲ್ ಸಿ ಮಲ್ಲಣ್ಣ ಅವರ ಗನ್ ಮ್ಯಾನ್ ಬಿಆರ್ ಎಸ್ ಕಾರ್ಯಕರ್ತರ ಮೇಲೆ ಕಚೇರಿಯಲ್ಲಿಯೇ ಗುಂಡಿನ ದಾಳಿ ನಡೆಸಿದ್ದಾರೆ. ಐದು ಸುಟ್ಟು ಗುಂಡು ಹಾರಿಸಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
You Might Also Like
TAGGED:ಬಿ ಆರ್ ಎಸ್ ಕಾರ್ಯಕರ್ತರು