ಶಾಸಕ ಸತೀಶ್‌ ಸೈಲ್‌ ಬಂಧನ, ಸಿಎಂ ಸಿದ್ದರಾಮಯ್ಯ ಬಂಧನಕ್ಕೆ ಮುನ್ನುಡಿ; BJP ಭವಿಷ್ಯ

ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಕಾರವಾರ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರ ಬಂಧನವಾಗಿದ್ದು, ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ರಾಜ್ಯ ಬಿಜೆಪಿ ಕಾಂಗ್ರೆಸ್‌ ಸರ್ಕಾರದ ವಿರುದ್ದ ಕಿಡಿ ಕಾರಿದೆ.

ಈ ಕುರಿತಂತೆ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ( ಈ ಹಿಂದಿನ ಟ್ವಿಟ್ಟರ್}‌ ಪೋಸ್ಟ್‌ ಮಾಡಲಾಗಿದ್ದು,

ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಕಾರವಾರ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರ ಬಂಧನ, ಸಿಎಂ ಸಿದ್ದರಾಮಯ್ಯ ಅವರ ಬಂಧನಕ್ಕೆ ಮುನ್ನುಡಿ ಬರೆದಂತಿದೆ.

ತಪ್ಪುಮಾಡಿಯೂ ರಾಜಾರೋಷದಿಂದಿದ್ದ ಸೈಲ್‌ ಅವರ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೂ ಬರಲಿದೆ. ರಾಜ್ಯದಾದ್ಯಂತ ಅಕ್ರಮ ಮರಳುಗಾರಿಕೆ, ಅಕ್ರಮ ಕಲ್ಲು ಗಣಿಗಾರಿಕೆ ಕಾಂಗ್ರೆಸ್ ನಾಯಕರ ರಕ್ಷಣೆಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನಡೆಯುತ್ತಿದೆ.
ಸದ್ಯದ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿಯನ್ನು ನೋಡಿದಾಗ ಕಾಂಗ್ರೆಸ್‌ ಸರ್ಕಾರ ಜೈಲಿನಿಂದಲೇ ನಡೆಯುವುದು ಬಹುತೇಕ ಖಚಿತವಾಗಿದೆ ಎಂದು ಭವಿಷ್ಯ ನುಡಿದಿದೆ.

https://twitter.com/BJP4Karnataka/status/1849803628170895494?t=grDeyqfFBGQTlwfhzHXfPw&s=08

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read