ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮಾಡಿ ಸರ್ಕಾರದ ಬೊಕ್ಕಸಕ್ಕ ನಷ್ಟ ಉಂಟು ಮಾಡಿರುವ ಆರೋಪ ಪ್ರಕರಣದಲ್ಲಿ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಸತೀಶ್ ಸೈಲ್ ಅವರಿಗೆ ಸೇರಿದ 21 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಸತೀಶ್ ಸೈಲ್ ಅವರಿಗೆ ಸೇರಿದ ಗೋವಾ ಮೂಲದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಕಬ್ಬಿಣದ ಅದಿರು ಅಕ್ರಮ ಸಾಗಣೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ ಇಡಿ ಅಧಿಕಾರಿಗಳು ಸತೀಶ್ ಸೈಲ್ ಅವರನ್ನು ಬಂಧಿಸಿದ್ದರು. ಅನಾರೋಗ್ಯದ ಕಾರಣ ಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದಿದ್ದರು. ಶುಕ್ರವಾರ ಮಧ್ಯಂತರ ಜಾಮೀನು ರದ್ದುಗೊಂಡಿದೆ.
ಗೋವಾದ ಚಿಕಾಲಿಮ್ ಗ್ರಾಮದಲ್ಲಿ 12,500 ಚ.ಮೀ. ಭೂಮಿ, ದಕ್ಷಿಣ ಗೋವಾದಲ್ಲಿರುವ ಪೆಟ್ರೋಕ್ಯಾಲೆ ಕೋಟಾ ಎಂದು ಕರೆಯುವ 16,850 ಚ. ಮೀಟರ್ ಕೃಷಿ ಆಸ್ತಿ, ಗೋವಾದ ವಾಸ್ಕೋದಲ್ಲಿರುವ ಬಹು ಮಹಡಿಗಳ ವಾಣಿಜ್ಯ ಕಟ್ಟಡ ಜಪ್ತಿ ಮಾಡಲಾಗಿದೆ. ಇವುಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ 64 ಕೋಟಿ ರೂಪಾಯಿ ಇದೆ. ಇಡಿ ಪ್ರಕಾರ ಈ ಆಸ್ತಿಗಳ ಪ್ರಸಕ್ತ ಮೌಲ್ಯ 21 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ED, Bengaluru has provisionally attached immovable properties worth Rs. 21 Crore on 06.11.2025 under PMLA, 2002 in the case of Satish Sail and others for the offense of illegal export of iron ore fines, belonging to Satish Krishna sail, MLA Karwar constituency, holding through…
— ED (@dir_ed) November 8, 2025
