ಕ್ಷೇತ್ರ ಪ್ರವಾಸ ವೇಳೆ ಸಂತೆಯಲ್ಲಿ ತರಕಾರಿ, ಹೂವು ಖರೀದಿಸಿದ ಶಾಸಕ ಬಸವರಾಜು ಶಿವಗಂಗಾ

ದಾವಣಗೆರೆ: ಚನ್ನಗಿರಿ ಶಾಸಕ ಬಸವರಾಜು ವಿ ಶಿವಗಂಗಾ ದೇವರಹಳ್ಳಿ ಸಂತೆಯಲ್ಲಿ ಹೂ ಮತ್ತು ತರಕಾರಿ ಖರೀದಿಸಿದ್ದಾರೆ.

ಕ್ಷೇತ್ರ ಪ್ರವಾಸ ವೇಳೆ ದೇವರಹಳ್ಳಿಗೆ ಭೇಟಿ ನೀಡಿದ ಅವರು ಸಂತೆಗೆ ಆಗಮಿಸಿ ವ್ಯಾಪಾರಿಗಳನ್ನು ಮಾತನಾಡಿಸಿ ಅವರ ಕಷ್ಟಗಳನ್ನು ಆಲಿಸಿದರು. ಇದೇ ವೇಳೆ ಸಾಮಾನ್ಯರಂತೆ ಕೈಯಲ್ಲಿ ಚೀಲ ಹಿಡಿದು ದೀಪಾವಳಿ ಹಬ್ಬಕ್ಕಾಗಿ ಜವಳಿಕಾಯಿ, ಟೊಮೋಟೊ ಇನ್ನೀತರೆ ತರಕಾರಿಗಳನ್ನು ಖರೀದಿ ಮಾಡಿದರು.

ವಾರದ ಸಂತೆಗೆ ಬಂದು ವ್ಯಾಪಾರ ಮಾಡುವವರು ಕೋಟ್ಯಧಿಪತಿಗಳಲ್ಲ, ಉದ್ಯಮಿಗಳಲ್ಲ, ಕೃಷಿಕರು, ಕಾರ್ಮಿಕರು ಮತ್ತು ದುಡಿಯುವ ವರ್ಗದ ಬಡವರು ಜನಸಾಮಾನ್ಯರು ತರಕಾರಿ ಖರೀದಿಸುತ್ತಾರೆ. ಮಾಲ್ ಮತ್ತಿತರ ಸ್ಥಳಗಳಲ್ಲಿ  ತರಕಾರಿಗಳನ್ನು ಖರೀದಿಸುವುದಕ್ಕಿಂತ ಹಳ್ಳಿಗಾಡಿನ ರೈತರು ಬೆಳೆಯುವ ತಾಜಾ ತಾಜಾ ತರಕಾರಿಗಳನ್ನು ಖರೀದಿ ಮಾಡಿ. ಇದು ಆರೋಗ್ಯಕ್ಕೂ ಉತ್ತಮ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read