ತಾಲೂಕು ಕಚೇರಿಗೆ ಶಾಸಕ ಅರಗ ಜ್ಞಾನೇಂದ್ರ ದಿಢೀರ್ ಭೇಟಿ; ಆಫೀಸ್ ನಲ್ಲಿ ಸಿಬ್ಬಂದಿಗಳೇ ಇಲ್ಲ… ಖಾಲಿ ಚೇರು ಕಂಡು ಗರಂ ಆದ ಮಾಜಿ ಗೃಹ ಸಚಿವ

ಶಿವಮೊಗ್ಗ: ಶಾಸಕ ಅರಗ ಜ್ಞಾನೇಂದ್ರ ತೀರ್ಥಹಳ್ಳಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವೇಳೆ ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳೇ ನಾಪತ್ತೆಯಾಗಿದ್ದು, ಮಾಜಿ ಗೃಹ ಸಚಿವರ ಕಣ್ಣು ಕೆಂಪಗಾಗುವಂತೆ ಮಾಡಿದೆ.

ತಾಲೂಕು ಕಚೇರಿಗೆ ದಿಢೀರ್ ಭೇಟಿ ಕೊಟ್ಟ ಶಾಸಕರು ಕಚೇರಿ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ. ಅವಧಿಗೂ ಮುನ್ನವೇ ಕಚೇರಿಯಿಂದ ಅಧಿಕಾರಿಗಳು ಹೋಗಿರುವುದು, ಸಿಬ್ಬಂದಿಗಳು ಕೂಡ ಕಚೇರಿಯಲ್ಲಿರದಿರುವುದು ಗೊತ್ತಾಗಿದೆ. ಇದರಿಂದ ಗರಂ ಆದ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮ ಕೆಲಸಗಳಿಗಾಗಿ ಬಂದಿರುವ ಸಾರ್ವಜನಿಕರು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಕಚೇರಿ ರಿಜಿಸ್ಟರ್ ಪುಸ್ತಕ ತೆಗೆಸಿ ಪರಿಶೀಲಿಸಿ. ಕಚೇರಿಯಲ್ಲಿ ಅರ್ಧದಷ್ಟು ಸಿಬ್ಬಂದಿಗಳೇ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕರ ಕೆಲಸ ಮಾಡಿಕೊಡಬೇಕಾದ ಅಧಿಕಾರಿಗಳು ಕೆಲಸದ ಅವಧಿ ಮುಗಿಯುವ ಮೊದಲೇ ಕಚೇರಿ ಬಿಟ್ಟು ಜಾಗ ಖಾಲಿ ಮಾಡಿ ಹೊಗಿದ್ದಾರೆ. ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಈ ರೀತಿಯಾದರೆ ಜನರ ಕೆಲಸ ಮಾಡಿಕೊಡುವುದಾದರೂ ಹೇಗೆ ಎಂದು ಮೇಲಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಅವಧಿಗೂ ಮುನ್ನ ತೆರಳಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read