ಕಡಲೆ ಹಿಟ್ಟಿನ ಜೊತೆ ಇದನ್ನು ಬೆರೆಸಿ ಹಚ್ಚಿದ್ರೆ ಸಾಕು ದುಪ್ಪಟ್ಟಾಗುತ್ತೆ ಮುಖದ ಸೌಂದರ್ಯ..…!

ಕಡಲೆ ಹಿಟ್ಟು ನಿಮ್ಮ ಚರ್ಮದ ಮೇಲೆ ನೈಸರ್ಗಿಕ ಕ್ಲೆನ್ಸರ್‌ನಂತೆ ಕೆಲಸ ಮಾಡುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳ ಹೇರಳವಾಗಿವೆ. ಕಡಲೆ ಹಿಟ್ಟಿನಿಂದ ಚರ್ಮವನ್ನು ಸ್ವಚ್ಛಗೊಳಿಸುವುದರಿಂದ ಅನೇಕ ಬಗೆಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

ಕಡಲೆ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು, ಇದು ಚರ್ಮವನ್ನು ಹಲವು ಸಮಸ್ಯೆಗಳಿಂದ ರಕ್ಷಿಸುತ್ತದೆ. ನಿಮಗೆ ಆಗಾಗ ಮೊಡವೆಗಳು ಏಳ್ತಾ ಇದ್ರೆ, ಅದರಿಂದ ನಿಮ್ಮ ಮುಖವು ಹಾಳಾಗಿದ್ದರೆ ಕಡಲೆ ಹಿಟ್ಟು ನಿಮಗೆ ತುಂಬಾ ಸಹಾಯಕವಾಗಿದೆ. ಬೇಸನ್ ಮುಖದ ಮಂದತೆಯನ್ನು ಹೋಗಲಾಡಿಸಿ ಮೃದುವಾಗಿಸುತ್ತದೆ. ಒಣ ತ್ವಚೆಯಿಂದಲೂ ಪರಿಹಾರ ನೀಡುತ್ತದೆ.

ಕಡಲೆ ಹಿಟ್ಟನ್ನು ಮೊಸರಿನೊಂದಿಗೆ ಬೆರೆಸಿ ಮುಖಕ್ಕೆ ಲೇಪಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ಚರ್ಮದಲ್ಲಿ ಹೆಚ್ಚುವರಿ ಮೇದೋಗ್ರಂಥಿಗಳ ರಚನೆಯನ್ನು ಇದು ತಡೆಯುತ್ತದೆ. ಮುಖದ ಜಿಡ್ಡನ್ನು ನಿವಾರಿಸುತ್ತದೆ. ಈ ಪ್ಯಾಕ್ ಅನ್ನು ಹಚ್ಚುವ ಮೊದಲು ಮುಖ ತೊಳೆಯಿರಿ. ಸ್ವಚ್ಛವಾದ ಬಟ್ಟೆಯಿಂದ ಮುಖವನ್ನು ಒರೆಸಿಕೊಂಡು ನಂತರ ಈ ಮೊಸರು ಮತ್ತು ಕಡಲೆ ಹಿಟ್ಟಿನ ಪ್ಯಾಕ್‌ ಅನ್ನು ಲೇಪಿಸಿಕೊಳ್ಳಿ. ಲೇಪನ ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ.

ಒಂದು ಬೌಲ್‌ನಲ್ಲಿ ಕಡಲೆ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸೌತೆಕಾಯಿ ಪೇಸ್ಟ್ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಕುತ್ತಿಗೆ ಹಾಗೂ ಮುಖಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ. ಸುಮಾರು 20 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ಮೊಡವೆಗಳ ಸಮಸ್ಯೆ ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ.

ಕಡಲೆ ಹಿಟ್ಟಿಗೆ ರೋಸ್‌ ವಾಟರ್‌, ಸ್ವಲ್ಪ ಅರಿಶಿನ ಮತ್ತು ಮುಲ್ತಾನಿ ಮಿಟ್ಟಿ ಮಿಶ್ರಣ ಮಾಡಿ. ಇದನ್ನು ಕುತ್ತಿಗೆ ಹಾಗೂ ಮುಖಕ್ಕೆ ಹಚ್ಚಿಕೊಳ್ಳಿ. ಲಘುವಾಗಿ ಕೈಗಳಿಂದ ಮಸಾಜ್ ಮಾಡಿ. 15 ನಿಮಿಷಗಳ ನಂತರ ಇದನ್ನು ತೊಳೆಯಿರಿ. ಈ ರೀತಿ ಮಾಡುವುದರಿಂದ ಮುಖ ಡಲ್‌ ಆಗಿ ಕಾಣುವುದಿಲ್ಲ.

ಸ್ವಲ್ಪ ಹಾಲಿನ ಕೆನೆ ಮತ್ತು ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ ಅದನ್ನು ಫೇಸ್‌ ಪ್ಯಾಕ್‌ ರೀತಿಯಲ್ಲಿ ಹಚ್ಚಿಕೊಳ್ಳಿ. ಇದು ನಿಮ್ಮ ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ. ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ಮೈಬಣ್ಣವನ್ನು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read