BIG NEWS: ‘ಮಿಷನ್ ಅಸ್ಮಿತಾ’ ಕಾರ್ಯಾಚರಣೆ: ಮತಾಂತರ ದಂಧೆಯಲ್ಲಿ ತೊಡಗಿದ್ದ 10 ಆರೋಪಿಗಳು ಅರೆಸ್ಟ್

ಲಖನೌ: ಮತಾಂತರ ದಂಧೆಯಲ್ಲಿ ನಿರತರಾಗಿದ್ದ ಹತ್ತು ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬಡ ಜನರಿಗೆ ಹಣದ ಆಮಿಷವೊಡ್ಡಿ ಮತಾಂತರ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಬೃಹತ್ ಜಾಲವನ್ನು ‘ಮಿಷನ್ ಅಸ್ಮಿತಾ’ ಕಾರ್ಯಾಚರಣೆಯಲ್ಲಿ ಬೇಧಿಸಲಾಗಿದೆ.

33 ಹಾಗೂ 18 ವರ್ಷದ ಯುವತಿಯರು ಆಗ್ರಾದಿಂದ ಮಾರ್ಚ್ ನಲ್ಲಿ ನಾಪತ್ತೆಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಅವರನ್ನು ಅಕ್ರಮವಾಗಿ ಬೇರೆ ಧರ್ಮಕ್ಕೆ ಮತಾಂತರ ಮಾಡಿರುವುದು ಬೆಳಕಿಗೆ ಬದಿದೆ. ಅವರಲ್ಲಿ ಓರ್ವ ಮಹಿಳೆ ಎಕೆ-47 ಬಂದೂಕು ಹಿಡಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಲವ್ ಜಿಹಾದ್ ಹಾಗೂ ತೀವ್ರವಾದಿಗಳ ಗುಂಪು ಆಕೆಯನ್ನು ಮತಾಂತರಗೊಳಿಸಿರುವುದು ಪತ್ತೆಯಾಗಿತ್ತು. ನಿಷೇಧಿತ ಐಎಸ್ ಐಎಸ್ ಸಂಘಟನೆ ಕಟ್ಟುವ ಸಂಚು ಇರುವುದು ತನಿಖೆಯಲ್ಲಿ ಗೊತ್ತಾಗಿದೆ.

‘ಮಿಷನ್ ಅಸ್ಮಿತಾ’ ಎಂಬ ಕಾರ್ಯಾಚರಣೆ ಮೂಲಕ ಮತಾಂತರದಲ್ಲಿ ತೊಡಗಿದ್ದ ಒಟ್ಟು ಹತ್ತು ಜನರನ್ನು ಬಂಧಿಸಲಾಗಿದೆ. ರಾಜಸ್ಥಾನದ ಮೂವರು, ಉತ್ತರಪ್ರದೇಶ, ಪಶ್ಚಿಮ ಬಂಗಾಳದ ತಲ ಇಬ್ಬರು, ಗೋವಾ, ಉತ್ತರಾಖಂಡ, ದೆಹಲಿಯ ತಲಾ ಒಬ್ಬರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ರಾಜೀವ್ ಕೃಷ್ಣ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read