ಕುದುರೆ ಸವಾರಿ ವೇಳೆ ಬಿದ್ದು ದುರಂತ ಸಾವು ಕಂಡ ವಿಶ್ವ ಸುಂದರಿ ಸ್ಪರ್ಧೆ ಫೈನಲಿಸ್ಟ್ ಸಿಯೆನ್ನಾ ವೀರ್

ನ್ಯೂಯಾರ್ಕ್: 2022 ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದ ಆಸ್ಟ್ರೇಲಿಯಾದ ಮಾಡೆಲ್ ಸಿಯೆನ್ನಾ ವೀರ್ ನಿಧನರಾಗಿದ್ದಾರೆ.

ಕುದುರೆ ಸವಾರಿ ಅಪಘಾತದ ನಂತರ 23 ವರ್ಷದ ಸಿಯೆನ್ನಾ ಸಾವನ್ನಪ್ಪಿದ್ದಾರೆ. ಆಕೆ ಆಸ್ಟ್ರೇಲಿಯಾದಲ್ಲಿ ಕಳೆದ ತಿಂಗಳು ಕುದುರೆ ಸವಾರಿ ವೇಳೆ ಸಂಭವಿಸಿದ ಅಪಘಾತದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಏಪ್ರಿಲ್ 2 ರಂದು ವಿಂಡ್ಸರ್ ಪೋಲೋ ಮೈದಾನದಲ್ಲಿ ಸವಾರಿ ಮಾಡುತ್ತಿದ್ದ ಸಮಯದಲ್ಲಿ ಕುದುರೆಯಿಂದ ಬಿದ್ದು ಆಕೆಗೆ ಗಂಭೀರ ಗಾಯಗಳಾಗಿವೆ. ವೀರ್ ಅನ್ನು ಹಲವಾರು ವಾರಗಳವರೆಗೆ ಜೀವ ರಕ್ಷಕ ಸಾಧನಗಳೊಂದಿಗೆ ಚಿಕಿತ್ಸೆ ನೀಡಲಾಗಿತ್ತು. ಮೇ 4 ಗುರುವಾರದಂದು ಆಕೆಗೆ ಅಳವಡಿಸಿದ್ದ ಜೀವ ರಕ್ಷಕ ಸಾಧನ ತೆಗೆದುಹಾಕಲು ಆಕೆಯ ಕುಟುಂಬವು ಕಠಿಣ ನಿರ್ಧಾರವನ್ನು ತೆಗೆದುಕೊಂಡ ನಂತರ ಕೊನೆಯುಸಿರೆಳೆದಿದ್ದಾರೆ.

ಆಕೆಯ ನಿಧನದ ಸುದ್ದಿಯನ್ನು ಅವರ ಕುಟುಂಬ ಮತ್ತು ಅವರ ಮಾಡೆಲಿಂಗ್ ಸಂಸ್ಥೆ ಸ್ಕೂಪ್ ಮ್ಯಾನೇಜ್‌ಮೆಂಟ್ ಹಂಚಿಕೊಂಡಿದೆ. ಸಂಸ್ಥೆಯು ಮಾಡೆಲ್‌ನ ಹಲವಾರು ಚಿತ್ರಗಳನ್ನು Instagram ನಲ್ಲಿ “ನಮ್ಮ ಹೃದಯದಲ್ಲಿ ಶಾಶ್ವತವಾಗಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದೆ.

2022 ರ ಆಸ್ಟ್ರೇಲಿಯನ್ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 27 ಅಂತಿಮ ಸ್ಪರ್ಧಿಗಳಲ್ಲಿ ಸಿಯೆನ್ನಾ ವೀರ್ ಒಬ್ಬರು. ಅವರು ಸಿಡ್ನಿ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯ ಮತ್ತು ಮನೋವಿಜ್ಞಾನದಲ್ಲಿ ಡಬಲ್ ಪದವಿಯನ್ನು ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read