Bangalore Bandh : ಬೆಂಗಳೂರಲ್ಲಿ 3 ‘ಏರ್ ಪೋರ್ಟ್ ಟ್ಯಾಕ್ಸಿ’ಗೆ ಕಲ್ಲು ತೂರಿದ ಕಿಡಿಗೇಡಿಗಳು : ಬಿಗಿ ಪೊಲೀಸ್ ಭದ್ರತೆ

ಬೆಂಗಳೂರು : ಬೆಂಗಳೂರು ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಸ್ತೆಗಿಳಿದ ಮೂರು ಏರ್ಪೋರ್ಟ್ ಟ್ಯಾಕ್ಸಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ನಡೆದಿದೆ.ಈ ಹಿನ್ನೆಲೆ ಬೆಂಗಳೂರಿನ ಎಲ್ಲಾ ಕಡೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.  

ಏರ್ ಪೋರ್ಟ್ ನಿಂದ   ಆಗಮಿಸುವ ವೇಳೆ ಏರ್ಪೋರ್ಟ್ ಟ್ಯಾಕ್ಸಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಬಗ್ಗೆ ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿದ್ದಾರೆ.

ನಾನು ಏರ್ ಪೋರ್ಟ್ ನಿಂದ  ಬರುತ್ತಿದ್ದಾಗ ಟ್ಯಾಕ್ಸಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಾರಿನಲ್ಲಿ ನಾನು, ನನ್ನ ಹೆಂಡತಿ ಹಾಗೂ 6 ವರ್ಷದ ಮಗ ಇದ್ದೆವು, ದಾಳಿಯಿಂದ ಬಹಳ ಆತಂಕವಾಯಿತು. ಟ್ಯಾಕ್ಸಿಯ ಗಾಜುಗಳು ಪುಡಿಪುಡಿಯಾಗಿವೆ.. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಏನಾಗಿದೆ? ಎಂದು ಟ್ವೀಟ್ ಮಾಡಿದ್ದಾರೆ.

https://twitter.com/rickypradhumn/status/1700982356390412765?ref_src=twsrc%5Etfw%7Ctwcamp%5Etweetembed%7Ctwterm%5E1700982356390412765%7Ctwgr%5E8d568697ea86fe6e695211e268d68165bae9e8a3%7Ctwcon%5Es1_&ref_url=https%3A%2F%2Fvistaranews.com%2Fkarnataka%2Fbengaluru-bandh-stone-pelted-on-airport-taxi-some-routes-are-changed-in-the-city%2F450873.html

ಪ್ರಯಾಣಿಕರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗುತ್ತಿದ್ದ ಮೂರು ಟ್ಯಾಕ್ಸಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇವುಗಳಲ್ಲಿ ಎರಡು ಊಬರ್ ಟ್ಯಾಕ್ಸಿ ಆಗಿದ್ದು, ಮತ್ತೊಂದು ಕೆಎಸ್‌ಟಿಡಿಸಿಯ ಟ್ಯಾಕ್ಸಿಯಾಗಿದೆ.ಸೋಮವಾರ ಮುಂಜಾನೆ ದೇವನಹಳ್ಳಿ ಬಳಿ ಕಿಡಿಗೇಡಿಗಳು ಟ್ಯಾಕ್ಸಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಒಂದು ಟ್ಯಾಕ್ಸಿಯ ಮುಂಭಾಗದ ಗಾಜು ಒಡೆದಿದೆ, ಮತ್ತೊಂದು ಕಡೆ ಟ್ಯಾಕ್ಸಿಯ ಡ್ರೈವರ್ ಸೀಟಿನ ಕಿಟಕಿ ಗ್ಲಾಸು ಪುಡಿ ಪುಡಿಯಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read