ಬಾಲಕಿ ಮೇಲೆ ಪ್ಯೂನ್ ನಿಂದ ಅತ್ಯಾಚಾರ: ಗರ್ಭಿಣಿಯಾಗುತ್ತಿದ್ದಂತೆ ವಿಷಯ ಬೆಳಕಿಗೆ

13 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಾಲೆಯ ಪ್ಯೂನ್ ಓರ್ವ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಫಾರೂಕಾಬಾದ್ ನಲ್ಲಿ ನಡೆದಿದೆ.

ಬಾಲಕಿ ಗರ್ಭಿಣಿಯುತ್ತಿದ್ದಂತೆ ಆಕೆಯ ತಾಯಿ ವಿಚಾರಿಸಿದಾಗ ಬಾಲಕಿ ವಿಷಯ ಬಾಯ್ಬಿಟ್ಟಿದ್ದಾಳೆ. ಆರೋಪಿ ಅಮಿತ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಶಾಲೆಗೆ ಹೋಗಿದ್ದ ಬಾಲಕಿ, ವಾಶ್ ರೂಮ್ ಗೆ ಹೋದಾಗ ಆರೋಪಿ ಅಮಿತ್ ಹಾಗೂ ಪಂಕಜ್ ಎಂಬುವವರು ಬಾಲಕಿಯನ್ನು ಹೊತ್ತೊಯ್ದು, ಖಾಲಿ ಮನೆಯೊಂದರಲ್ಲಿ ಕೂಡಿಟ್ಟಿದ್ದಾರೆ. ಅಮಿತ್ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಪಂಕಜ್ ಎಂಬಾತ ಮನೆಯ ಹೊರಗೆ ಕಾವಲು ನಿಂತಿದ್ದ ಎಂದು ಆರೋಪಿಸಲಾಗಿದೆ.

ಆರೋಪಿಗಳು ಕೃತ್ಯದ ಬಳಿಕ ಬಾಲಕಿಗೆ ಯಾರಿಗೂ ವಿಷಯ ಹೇಳದಂತೆ ತಾಕೀತು ಮಾಡಿದ್ದರೆ. ವಿಷಯ ಬಾಯ್ಬಿಟ್ಟರೆ ಕೊಲೆ ಮಾದುವುದಾಗಿ ಬೆದರಿಸಿದ್ದಾರೆ. ಹಾಗಾಗಿ ಬಾಲಕಿ ಭಾಯದಲ್ಲೇ ಬಾಯಿಮುಚ್ಚಿಕೊಂಡಿದ್ದಳು. ಮನೆಯಲ್ಲಿ ಬಾಲಕಿಯ ವಿಚಿತ್ರ ವರ್ತನೆ, ಆಕೆ ಗರ್ಭಿಣಿಯಾಗಿದ್ದು ತಿಳಿಯುತ್ತಿದ್ದಂತೆ ಆಕೆಯ ತಾಯಿ ವಿಚಾರಿಸಿದ್ದಾಳೆ. ಈ ವೇಳೆ ಬಾಲಕಿ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆರೋಪಿಗಳ ವಿರುದ್ಧ ಪೋಕ್ಸೋ ಕೇಸ್ ಅಡಿ ಎಫ್ ಐಆರ್ ದಾಖಲಾಗಿದ್ದು, ಬಂಧನಕ್ಕಾಗಿ ಹುಡುಕಾಟ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read