ಮನೆ ಬಿಟ್ಟು ಬಂದ ಅಪ್ರಾಪ್ತೆ ಪುಸಲಾಯಿಸಿ ತಿರುಪತಿಗೆ ಕರೆದೊಯ್ದು ಅತ್ಯಾಚಾರ

ಬೆಂಗಳೂರು: ತಾಯಿಯೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದ ಅಪ್ರಾಪ್ತೆಯನ್ನು ವ್ಯಕ್ತಿಯೊಬ್ಬ ಪುಸಲಾಯಿಸಿ ತಿರುಪತಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ.

ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಕುರಿತು ಪ್ರಕರಣ ದಾಖಲಾಗಿದೆ. ದಾವಣಗೆರೆಯಲ್ಲಿ 9ನೇ ತರಗತಿ ಓದುತ್ತಿರುವ ಸಂತ್ರಸ್ತೆ ತಾಯಿ ಸರ್ಕಾರಿ ನೌಕರರಾಗಿದ್ದು, ಅನಾರೋಗ್ಯಕ್ಕೀಡಾಗಿ ಬೆಂಗಳೂರಿನಲ್ಲಿದ್ದಾರೆ. ತಾಯಿ ನೋಡಿಕೊಳ್ಳಲು ಬೆಂಗಳೂರಿಗೆ ಬಂದಿದ್ದ ಬಾಲಕಿಗೆ ಇನ್ಸ್ಟಾಗ್ರಾಮ್ ನಲ್ಲಿ ಸುನಿಲ್ ಪರಿಚಯವಾಗಿದೆ. ನಂತರ ಇಬ್ಬರೂ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿ ಕರೆ ಮಾಡುತ್ತಿದ್ದರು. ಈ ನಡುವೆ ಮಾರ್ಚ್ 13ರಂದು ತಾಯಿಯೊಂದಿಗೆ ಜಗಳವಾಡಿದ ಬಾಲಕಿ ಮನೆ ಬಿಟ್ಟು ಮೆಜೆಸ್ಟಿಕ್ ನಲ್ಲಿ ಸುನಿಲ್ ನನ್ನು ಭೇಟಿಯಾಗಿದ್ದಾಳೆ.

ತಿರುಪತಿ ದೇವಾಲಯಕ್ಕೆ ಹೋಗೋಣ ಎಂದು ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡಿದ್ದ ಆರೋಪಿ ಮೂರು ದಿನಗಳ ಕಾಲ ಲಾಡ್ಜ್ ನಲ್ಲಿ ಇರಿಸಿ ಅತ್ಯಚಾರ ಎಸಗಿದ್ದಾನೆ. ಭಾನುವಾರ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾನೆ. ಮನೆಗೆ ಮರಳಿದ ಬಾಲಕಿ ನಡೆದ ಸಂಗತಿಯನ್ನು ತಾಯಿಗೆ ತಿಳಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಸುನಿಲ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read