Shocking: ಅಪ್ರಾಪ್ತನಿಂದ 6 ವರ್ಷದ ಬಾಲಕನ ಮೇಲೆ ಅತ್ಯಾಚಾರ ; ವಿಡಿಯೋ ಚಿತ್ರೀಕರಿಸಿದ ಸಹೋದರ !

ಗುಜರಾತಿನ ಅಹ್ಮದಾಬಾದಿನ ನರೋಡಾ ಪ್ರದೇಶದಲ್ಲಿನ ಅಪಾರ್ಟ್ಮೆಂಟ್‌ನಲ್ಲಿ 9 ವರ್ಷದ ಬಾಲಕ 6 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ನಡೆದಿದೆ. ಆರೋಪಿಯ 14 ವರ್ಷದ ಸಹೋದರ ಈ ಕೃತ್ಯವನ್ನು ತನ್ನ ಫೋನ್‌ನಲ್ಲಿ ಚಿತ್ರೀಕರಿಸಿ ವೈರಲ್ ಮಾಡಿದ್ದಾನೆ. ಸಂತ್ರಸ್ತನ ಸಂಬಂಧಿಯೊಬ್ಬರು ವಿಡಿಯೋವನ್ನು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಅದನ್ನು ತಾಯಿಗೆ ತೋರಿಸಿದಾಗ ಆಕೆಯ ಗಮನಕ್ಕೆ ಬಂದಿದೆ. ನರೋಡ ಪೊಲೀಸರು ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿದ್ದು, ಬಾಲ ನ್ಯಾಯ ಕಾಯ್ದೆಯಡಿ ಇಬ್ಬರು ಅಪ್ರಾಪ್ತರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ದೂರಿನ ಪ್ರಕಾರ, ಸಂತ್ರಸ್ತನ ತಾಯಿ ಅದೇ ಫ್ಲ್ಯಾಟ್‌ನಲ್ಲಿ ವಾಸಿಸುವ ತನ್ನ ಸಂಬಂಧಿಯೊಬ್ಬರಿಂದ ವಿಡಿಯೋ ಪಡೆದಿದ್ದಾರೆ. ತಾಯಿ ತನ್ನ ಮಗನಿಗೆ ವಿಡಿಯೋ ತೋರಿಸಿ ಘಟನೆಯ ಬಗ್ಗೆ ಕೇಳಿದಾಗ, ಸಂತ್ರಸ್ತ ಮಾತನಾಡಲು ಹೆದರಿದ್ದಾನೆ.

ನಂತರ ತಾಯಿ ಸೊಸೈಟಿಯ ಅಧ್ಯಕ್ಷರನ್ನು ಸಂಪರ್ಕಿಸಿದಾಗ ವಿಡಿಯೋ ಸೊಸೈಟಿಯಲ್ಲಿ ವೈರಲ್ ಆಗುತ್ತಿದೆ ಎಂದು ಹೇಳಿದ್ದು, 14 ವರ್ಷದ ಅಪ್ರಾಪ್ತ ಬಾಲಕ ತನ್ನ ಫೋನ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂಬುದು ಕೂಡ ಆಕೆಗೆ ತಿಳಿಯಿತು. ನಂತರ ತಾಯಿ 14 ವರ್ಷದ ಬಾಲಕನನ್ನು ಸಂಪರ್ಕಿಸಿ ತನ್ನ ಮಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ವಿಡಿಯೋದಲ್ಲಿ ಕಂಡುಬಂದ 9 ವರ್ಷದ ಬಾಲಕನ ಬಗ್ಗೆ ಕೇಳಿದಾಗ ವಿಡಿಯೋ ಚಿತ್ರೀಕರಿಸಿದ ಬಾಲಕ, ಆತ ತನ್ನ ಸ್ವಂತ ತಮ್ಮ ಎಂದು ತಿಳಿಸಿದ್ದಾನೆ.

ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಬಾಲ ನ್ಯಾಯ ಕಾಯ್ದೆಯಡಿ ಇಬ್ಬರು ಅಪ್ರಾಪ್ತರ ವಿರುದ್ಧ ದೂರು ದಾಖಲಿಸಲಾಗಿದೆ. “ಆದಾಗ್ಯೂ, ಆರೋಪಿಗಳಿಬ್ಬರು ಬಾಲ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಅವರು ಯಾವುದೇ ಲೈಂಗಿಕ ದೌರ್ಜನ್ಯದಲ್ಲಿ ತೊಡಗಿಲ್ಲ ಎಂದು ಹೇಳಿದ್ದಾರೆ. ಅವರ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಪ್ರಾಸಿಕ್ಯೂಷನ್ ಜಾಮೀನು ಅರ್ಜಿಯನ್ನು ವಿರೋಧಿಸಿತಾದರೂ ನ್ಯಾಯಾಲಯವು ಬಾಲ ನ್ಯಾಯ ಕಾಯ್ದೆಯ ಷರತ್ತುಗಳ ಅಡಿಯಲ್ಲಿ ಅವರಿಗೆ ಜಾಮೀನು ನೀಡಿತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read