BIG NEWS : ಬೆಂಗಳೂರಲ್ಲಿ ‘ಅಂಬಿಗರ ಚೌಡಯ್ಯ’ ಪ್ರತಿಮೆ ಸ್ಥಾಪಿಸುವಂತೆ CM ಸಿದ್ದರಾಮಯ್ಯಗೆ ಸಚಿವ ‘ಪ್ರಿಯಾಂಕ್ ಖರ್ಗೆ’ ಮನವಿ

ಬೆಂಗಳೂರು : ಬೆಂಗಳೂರಲ್ಲಿ ‘ಅಂಬಿಗರ ಚೌಡಯ್ಯ’ ಪ್ರತಿಮೆ ಸ್ಥಾಪಿಸುವಂತೆ ಸಿಎಂ ಸಿದ್ದರಾಮಯ್ಯಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ‘ಕಲ್ಯಾಣದ ಶರಣ ಚಳವಳಿಯು ಕೇವಲ ಆಧ್ಯಾತ್ಮದ ಚಳವಳಿ ಮಾತ್ರವಲ್ಲ, ಆಧ್ಯಾತ್ಮದ ತಳಹದಿಯಲ್ಲಿ ಕಟ್ಟಿದ ಸಮ ಸಮಾಜದ ಕ್ರಾಂತಿ.
ಶರಣ ಪರಂಪರೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರದ್ದು ಪ್ರಮುಖ ಹೆಸರು, ತಮ್ಮ ಪ್ರಖರ ಜ್ಞಾನ, ಪ್ರಬುದ್ಧ ವಚನಗಳ ಮೂಲಕ ಅನುಭವ ಮಂಟಪದಲ್ಲಿ ತಮ್ಮದೇ ಆದ ಸ್ಥಾನ ಹೊಂದಿದ್ದವರು.ನಿಜ ಶರಣ ಅಂಬಿಗರ ಚೌಡಯ್ಯನವರ ತತ್ವಗಳನ್ನು ಸರ್ವಕಾಲಕ್ಕೂ ತಲುಪಿಸುವ ನಿಟ್ಟಿನಲ್ಲಿ ಅವರ ಪ್ರತಿಮೆಯನ್ನು ಬೆಂಗಳೂರಿನ ಪ್ರತಿಷ್ಠಿತ ಹಾಗೂ ಜನಪ್ರಿಯ ಸ್ಥಳದಲ್ಲಿ ಸ್ಥಾಪಿಸಲು ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ’ ಎಂದು ಅವರು ಹೇಳಿಕೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read