ನಾಡಿನ ರೈತ ಬಾಂಧವರಿಗೆ ‘ಎಳ್ಳ ಅಮಾವಾಸ್ಯೆ’ ಹಬ್ಬದ ಶುಭಾಶಯ ತಿಳಿಸಿದ ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು : ನಾಡಿನ ರೈತ ಬಾಂಧವರಿಗೆ ಸಚಿವ ಈಶ್ವರ್ ಖಂಡ್ರೆ ಎಳ್ಳ ಅಮಾವಾಸ್ಯೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಸಚಿವ ಈಶ್ವರ್ ಖಂಡ್ರೆ ‘ನಾಡಿನ ಸಮಸ್ತ ಜನತೆಗೆ ರೈತರ ಹಬ್ಬ #ಎಳ್ಳ #ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಳ್ಳ ಅಮಾವಾಸ್ಯೆ ಹಬ್ಬಕ್ಕೆ ವಿಶೇಷ ಮಹತ್ವವಿದೆ ಎಳ್ಳ ಅಮಾವಾಸ್ಯೆಯ ದಿನ ರೈತರು ಭೂತಾಯಿಗೆ ಚರಗ ಚೆಲ್ಲಿ ಸಂಭ್ರಮಿಸುವುದು ಸಂಪ್ರದಾಯ ಭೂಮಿಯಲ್ಲಿ ಬೆಳೆದ ಬೆಳೆಗಳ ಮಧ್ಯೆ ಭೂಮಿತಾಯಿಗೆ ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಉಡಿ ತುಂಬುತ್ತಾರೆ’.

‘ತಾವು ಒಯ್ದ ನೈವೇದ್ಯವನ್ನು ಬೆಳೆಯಲ್ಲಿ ಎರಚಿ (ಚರಗ ಚೆಲ್ಲಿ) ಭೂತಾಯಿಗೆ ಉಣಬಡಿಸುತ್ತಾರೆ. ನಂತರ ಬಂಧು–ಬಾಂಧವರೆಲ್ಲರೂ ಸೇರಿ ವಿಶೇಷವಾದ ಅಡುಗೆ , ಭಜ್ಜಿ, ರೊಟ್ಟ,   ಅಂಬಲಿ ಸವಿಯುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ’ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read