ಹಾಲು ಉತ್ಪಾದನೆ 51% ಹೆಚ್ಚಳ: ಭಾರತಕ್ಕೆ ಮೊದಲ ಸ್ಥಾನ: ವಿಶ್ವದಲ್ಲೇ ಅತ್ಯಂತ ವೇಗದ ಬೆಳವಣಿಗೆ: ಅಮಿತ್ ಶಾ

ನವದೆಹಲಿ: ಭಾರತವು ವಿಶ್ವದ ಹಾಲು ಉತ್ಪಾದನೆಯಲ್ಲಿ 24 ಶೇಕಡ ಪಾಲನ್ನು ಹೊಂದುವ ಮೂಲಕ ಮೊದಲ ಸ್ಥಾನ ತಲುಪಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.

ಗುಜರಾತ್‌ನ ಆನಂದ್ ಬಳಿ ರಾಷ್ಟ್ರೀಯ ಸಹಕಾರ ಡೈರಿ ಫೆಡರೇಶನ್ ಆಫ್ ಇಂಡಿಯಾ(ಎನ್‌ಸಿಡಿಎಫ್‌ಐ) ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಗಾಂಧಿನಗರದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆದ ಸಮಾರಂಭದಲ್ಲಿ ಸಚಿವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಳೆದ 8 ವರ್ಷಗಳಲ್ಲಿ ಭಾರತದಲ್ಲಿ ಹಾಲು ಉತ್ಪಾದನೆಯು ಸುಮಾರು 51 ಪ್ರತಿಶತದಷ್ಟು ಹೆಚ್ಚಾಗಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚು. ಇದು ಅತ್ಯಂತ ವೇಗದ ಹೆಚ್ಚಳವಾಗಿದೆ ಎಂದರು.

ಗ್ರಾಮೀಣ ಮಟ್ಟದಲ್ಲಿ ಎಲ್ಲಾ ಸಹಕಾರಿ ಬ್ಯಾಂಕ್‌ಗಳು, ಸಹಕಾರಿ ಹಾಲು ಸಂಘಗಳು ಮತ್ತು ಪಶುಪಾಲಕ ರೈತರಲ್ಲಿ ಪರಸ್ಪರ ಸಹಕಾರವನ್ನು ಖಾತ್ರಿಪಡಿಸುವ ಸಹಕಾರಿ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read