ಶಾಕಿಂಗ್: ಕಲಬೆರಕೆ ಹಾಲು ತಯಾರಿಸಿ ಮಾರಾಟ: ಪೊಲೀಸ್ ದಾಳಿ ವೇಳೆ ಇಬ್ಬರು ಅರೆಸ್ಟ್

ಬಾಗಲಕೋಟೆ: ಕಲಬೆರಕೆ ಹಾಲು ತಯಾರಿಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಾವಳಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲಬೆರಕೆ ಹಾಲು, ಅದಕ್ಕೆ ಬಳಸುತ್ತಿದ್ದ ವಸ್ತುಗಳನ್ನು ದಾಳಿಯ ವೇಳೆ ವಶಕ್ಕೆ ಪಡೆಯಲಾಗಿದೆ. ಅಡಿಹುಡಿ ಗ್ರಾಮದ ಸಚಿನ್ ಲಕ್ಷ್ಮಣ ನರೋಟೆ, ಶಾಂತಿಲಾಲ್ ಮಹದೇವ ನರೋಟೆ ಅವರಿಂದ 28 ಕ್ಯಾನ್‌ಗಳಲ್ಲಿದ್ದ 1120 ಲೀಟರ್ ಹಾಲಿನಲ್ಲಿ ಕಲಬೆರಕೆ, ಪೌಡರ್ ಮಿಶ್ರಣ ಮಾಡಿದ ಹಾಲನ್ನು ವಶಕ್ಕೆ ಪಡೆಯಲಾಗಿದೆ.

ಹಾಲಿನ ಪೌಡರ್, ರಾಸಾಯನಿಕ ಪೌಡರ್ ಬಳಸಿ ನಕಲಿ ಹಾಲು ತಯಾರಿಸುತ್ತಿದ್ದರು. ಈ ಹಾಲನ್ನು ಮಹಾರಾಷ್ಟ್ರದ ಜತ್ತ ಜಿಲ್ಲೆಗೆ ಸಾಗಿಸಲು ಮುಂದಾಗಿದ್ದರು. ಕಲಬೆರಕೆ ಹಾಲನ್ನು ಮಾರಾಟಕ್ಕಾಗಿ ಸಾಗಿಸುತ್ತಿದ್ದ ಎರಡು ಪಿಕಪ್ ವಾಹನಗಳು, ನಕಲಿ ಹಾಲು ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್ಐ ಎಸ್.ಕೆ. ಸಿಂಗನ್ನವರ, ಎಐ ನದಾಫ, ಎಸ್.ಕೆ. ಭಜಂತ್ರಿ, ಎಸ್.ಎನ್. ಹಚ್ಚಗೌಡರ, ಆರ್.ಎಸ್. ಬಸನ್ನವರ, ಬಿ.ಬಿ. ಯಡವೆ ಅವರು ಭಾಗವಹಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read