ದೇಸೀ ಹೇರ್‌ಕಟ್ – ಶೇವಿಂಗ್‌ನ ಟೈಮ್‌ಲ್ಯಾಪ್ಸ್‌ ವಿಡಿಯೋ ಶೇ‌ರ್‌ ಮಾಡಿಕೊಂಡ ಮೈಕೆಲ್ ವಾನ್

ತಮ್ಮ ಚತುರ ಟ್ವೀಟ್‌ಗಳಿಂದ ನೆಟ್ಟಿಗರ ವಲಯದಲ್ಲಿ ಸದಾ ಸುದ್ದಿಯಲ್ಲಿರುವ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ದೇಸೀ ಹೇರ್‌ಕಟ್ ಮಾಡಿಸಿಕೊಳ್ಳುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

“ಇಂದು ರಾತ್ರಿಯ ಐಪಿಎಲ್ ಫೈನಲ್‌ಗೆ ಪೂರ್ಣ ಸಜ್ಜಾಗಿದ್ದೇನೆ…… ಇದಾದ ಮೇಲೆ ಪ್ಲೇಆಫ್ ಫೈನಲ್‌ಗಾಗಿ ವೆಂಬ್ಲಿಗೆ ಸೀದಾ ಹೋಗೋದು.. ನೀವು ಮುಂಬಯಿಯಲ್ಲಿದ್ದರೆ ದಯವಿಟ್ಟು ಮುಂಬಯಿಯ ಆರ್ಮಿಸ್ಟನ್ ರಸ್ತೆಯಲ್ಲಿರುವ ದೀನ್‌ದಯಾಳ್‌ರನ್ನು ಭೇಟಿ ಮಾಡಿ. ಅವರು ಫೆಂಟಾಸ್ಟಿಕ್,” ಎಂದು ತಮ್ಮ ಹೇರ್‌ಕಟ್‌ನ ಟೈಮ್‌ಲ್ಯಾಪ್ಸ್ ವಿಡಿಯೋದೊಂದಿಗೆ ಟ್ವೀಟ್ ಮಾಡಿದ್ದಾರೆ ವಾನ್.

1,32,000 ಆಸನಗಳ ಸಾಮರ್ಥ್ಯದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಬೇಕಿದ್ದ ಫೈನಲ್ ಪಂದ್ಯ ಭಾರೀ ಮಳೆಯಿಂದಾಗಿ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ.

https://twitter.com/MichaelVaughan/status/1662691044163477504?ref_src=twsrc%5Etfw%7Ctwcamp%5Etweetembed%7Ctwterm%5E1662691044163477504%7Ctwgr%5E7c9fcd5326737616b2f3914952888a36b18d6f1c%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiac2390847183200-epaper-dhf6af4a9befa548589eba0f15b9db5a4f%2Fmichaelvaughanshareshilariousviralhaircutvideoinmumbaiaheadofcskvsgtiplfinal-newsid-n504053918

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read