SHOCKING: ಚೂರಿಯಿಂದ ಇರಿದು ನಾಲ್ವರನ್ನು ಕೊಂದ ಮಾನಸಿಕ ಅಸ್ವಸ್ಥ

ಮುಂಬೈ: ದಕ್ಷಿಣ ಮುಂಬೈನ ಗ್ರಾಂಟ್ ರೋಡ್ ಸ್ಟೇಷನ್ ಬಳಿಯ ವಸತಿ ಕಟ್ಟಡದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ನಾಲ್ವರು ನೆರೆಹೊರೆಯವರನ್ನು ಇರಿದು ಕೊಂದಿದ್ದಾನೆ. ಇನ್ನೊಬ್ಬನನ್ನು ಗಾಯಗೊಳಿಸಿದ್ದಾನೆ.

ಘಟನೆಯ ನಂತರ ಆರೋಪಿ ಕಟ್ಟಡದ ಕೊಠಡಿಯೊಳಗೆ ಬೀಗ ಹಾಕಿಕೊಂಡಿದ್ದ. ಗ್ರಾಂಟ್ ರಸ್ತೆಯಲ್ಲಿರುವ ಪಾರ್ವತಿ ಮ್ಯಾನ್ಷನ್‌ನಲ್ಲಿ ಶುಕ್ರವಾರ ಮಧ್ಯಾಹ್ನ 3.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಯನ್ನು ಚೇತನ್ ಗಾಲಾ ಎಂದು ಗುರುತಿಸಲಾಗಿದೆ. ಡಿಬಿ ಮಾರ್ಗ್ ಪೊಲೀಸರು ಆತನನ್ನು ಬಂಧಿಸಿದ್ದು, ಕೊಲೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ಪತ್ನಿ ಮತ್ತು ಮಕ್ಕಳು ಎರಡು ತಿಂಗಳ ಹಿಂದೆ ಆತನನ್ನು ತೊರೆದಿದ್ದರು ಎಂದು ವಲಯ ಡಿಸಿಪಿ ಅಭಿನವ್ ದೇಶಮುಖ್ ತಿಳಿಸಿದ್ದಾರೆ.

ಗಾಲಾ ಮಾನಸಿಕವಾಗಿ ತೊಂದರೆಗೀಡಾಗಿದ್ದಾನೆ. ಯಾವುದೇ ಚಿಕಿತ್ಸೆಗೆ ಒಳಗಾಗುತ್ತಿಲ್ಲ, ನಾವು ಅವನನ್ನು ಪ್ರಶ್ನಿಸುತ್ತಿದ್ದೇವೆ. ಗಾಯಾಳುಗಳನ್ನು ಗಿರ್ಗಾಂವ್‌ನ ಖಾಸಗಿ ಆಸ್ಪತ್ರೆಗೆ ಮತ್ತು ನಾಯರ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ದಂಪತಿಗಳಾದ ಜಯೇಂದ್ರ ಮತ್ತು ನೀಲಾ ಮಿಸ್ತ್ರಿ, ಇಬ್ಬರು ಮಹಿಳೆಯರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read