ಜೀವನ ಶೈಲಿಯಲ್ಲಿ ಈ ಐದು ಬದಲಾವಣೆ ಮಾಡಿಕೊಂಡರೆ ಮುಟ್ಟಿನ ನೋವಿನಿಂದ ಪಾರಾಗಬಹುದು

ಪ್ರತಿ ತಿಂಗಳು ಮುಟ್ಟಿನ ಸಂದರ್ಭದಲ್ಲಿ ನೋವು ಮತ್ತು ಅಸ್ವಸ್ಥತೆ ಮಹಿಳೆಯರನ್ನು ಕಾಡುತ್ತದೆ. ಶೇ.80ರಷ್ಟು ಮಹಿಳೆಯರು ತಮ್ಮ ಜೀವನದ  ಕೆಲವು ಹಂತದಲ್ಲಿ ಮುಟ್ಟಿನ ನೋವನ್ನು ಅನುಭವಿಸುತ್ತಾರೆ. ಕೆಲವರಿಗೆ ಇದು ಅವಧಿಗಳ ಆರಂಭದಿಂದ ಋತುಬಂಧದವರೆಗೆ ಇರುತ್ತದೆ. ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಮೂಲಕ ಋತುಚಕ್ರದ ನೋವನ್ನು ಕಡಿಮೆ ಮಾಡಬಹುದು.

ಆರೋಗ್ಯಕರ ತಿನಿಸು: ಗರ್ಭಾಶಯದ ಆರೋಗ್ಯ ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ. ಋತುಚಕ್ರದ ಸಮಯದಲ್ಲಿ ಹಾರ್ಮೋನುಗಳ ಅಸಮತೋಲನದಿಂದ ಅನಾರೋಗ್ಯಕರ ಆಹಾರದ ಕಡುಬಯಕೆಗಳು ಕಾಡುತ್ತವೆ. ಆ ಸಮಯದಲ್ಲಿ ಜಂಕ್‌ ಫುಡ್‌, ಕುರುಕಲು ತಿಂಡಿಗಳನ್ನು ತಿನ್ನಬೇಡಿ. ಆರೋಗ್ಯಕರ ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ತಿಂಡಿಗಳನ್ನು ಸೇವಿಸಿ. ನಿಮ್ಮ ಆಹಾರದಲ್ಲಿ ಒಮೆಗಾ 3ನಂತಹ ಆರೋಗ್ಯಕರ ಕೊಬ್ಬಿನಾಮ್ಲಗಳು ಇರಬೇಕು. ಹಸಿರು ತರಕಾರಿಗಳು, ದ್ವಿದಳ ಧಾನ್ಯಗಳು, ಫೈಬರ್‌ ಅಂಶವಿರುವ ಆಹಾರವನ್ನು ಸೇವಿಸಿದ್ರೆ ಮುಟ್ಟಿನ ನೋವು ಮತ್ತು ಸೆಳೆತ ಕಡಿಮೆಯಾಗುತ್ತದೆ.

ವ್ಯಾಯಾಮ: ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಹ ಮುಟ್ಟಿನ ನೋವನ್ನು ನಿಯಂತ್ರಿಸಬಹುದು. ವಾಕಿಂಗ್, ರನ್ನಿಂಗ್‌, ಈಜು ಅಥವಾ ಯೋಗ ನೋವನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತದೆ. ವ್ಯಾಯಾಮವು ನೈಸರ್ಗಿಕ ನೋವು ನಿವಾರಕಗಳಾಗಿ ಕಾರ್ಯನಿರ್ವಹಿಸುವ ಎಂಡಾರ್ಫಿನ್ ಮತ್ತು ಸಿರೊಟೋನಿನ್ ನಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ.

ಹೈಡ್ರೇಟೆಡ್ ಆಗಿರಿ: ನೀವು ನಿರ್ಜಲೀಕರಣಗೊಂಡರೆ ಮುಟ್ಟಿನ ಸೆಳೆತ ಮತ್ತಷ್ಟು ಹೆಚ್ಚಾಗುತ್ತದೆ. ದಿನಕ್ಕೆ ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯಿರಿ. ಹಣ್ಣಿನ ರಸವನ್ನು ಕೂಡ ಸೇವನೆ ಮಾಡಬಹುದು. ಅದು ನಿಮ್ಮ ದೇಹವನ್ನು ಹೈಡ್ರೇಟ್‌ ಆಗಿಡುತ್ತದೆ.

ಹೀಟ್ ಥೆರಪಿ: ಮುಟ್ಟಿನ ಸಮಯದಲ್ಲಿ ದೇಹಕ್ಕೆ ಸ್ವಲ್ಪ ವಿಶ್ರಾಂತಿ ಬೇಕು. ಸೆಳೆತ ಮತ್ತು ಕಿಬ್ಬೊಟ್ಟೆ ನೋವಿನಿಂದ ರಿಲೀಫ್‌ ಪಡೆಯಲು ಮಹಿಳೆಯರು ಹಾಟ್‌ ವಾಟರ್‌ ಬ್ಯಾಗ್‌ಗಳನ್ನು ಬಳಸುತ್ತಾರೆ. ಸ್ವಲ್ಪ ಮಟ್ಟಿಗೆ ಇದರಿಂದ ಆರಾಮ ಸಿಗಬಹುದು. ಇದಕ್ಕೆ ಪರ್ಯಾಯವಾಗಿ ಪೀರಿಯಡ್ ಪೇನ್ ರಿಲೀಫ್ ಆಯಿಲ್ ಗಳನ್ನು ಬಳಸಬಹುದು. ದಾಲ್ಚಿನಿ ಸೇರಿದಂತೆ ವಿವಿಧ ಮಸಾಲೆಗಳಿಂದ ತಯಾರಾಗುವ ಈ ಎಣ್ಣೆಯು ಸ್ವಯಂ-ಬೆಚ್ಚಗಾಗುವ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಹಾಗಾಗಿ ಮುಟ್ಟಿನ ನೋವನ್ನು ಇದು ಕಡಿಮೆ ಮಾಡುತ್ತದೆ ಜೊತೆಗೆ ಮನಸ್ಸಿನ ಒತ್ತಡವೂ ನಿವಾರಣೆಯಾಗುತ್ತದೆ.

ವಿಶ್ರಾಂತಿ ತೆಗೆದುಕೊಳ್ಳಿ : ಮುಟ್ಟಿನ ಸಮಯದಲ್ಲಿ ಅತಿಯಾಗಿ ಕೆಲಸ ಮಾಡಲು ಹೋಗಬೇಡಿ. ನೋವನ್ನು ಸಹಿಸಿಕೊಂಡು, ನಿರ್ಲಕ್ಷಿಸಿ ಕೆಲಸ ಮಾಡುತ್ತಲೇ ಇರಬೇಡಿ. ದೇಹಕ್ಕೆ ವಿಶ್ರಾಂತಿಯ ಅಗತ್ಯವಿದ್ದಾಗ ವಿರಮಿಸುವುದು ಸೂಕ್ತ. ಕೆಲಸ ಮತ್ತು ಮನೆ ನಿರ್ವಹಣೆಯಿಂದ ಉಂಟಾಗುವ ಒತ್ತಡವು ದೈಹಿಕ ಅಸ್ವಸ್ಥತೆಯನ್ನು ಹೆಚ್ಚಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read