ಈ ಗ್ರಾಮದಲ್ಲಿ ಎರಡು ಮದುವೆಯಾಗ್ತಾರೆ ಪುರುಷರು, ವಿಚಿತ್ರವಾಗಿದೆ ಇದರ ಹಿಂದಿನ ಕಾರಣ….!

ರಾಜಸ್ಥಾನದ ಜೈಸಲ್ಮೇರ್‌ನಲ್ಲಿರೋ ಹಳ್ಳಿಯೊಂದರಲ್ಲಿ ಬಹಳ ವಿಚಿತ್ರವಾದ ಸಂಪ್ರದಾಯವಿದೆ. ಸಾಮಾನ್ಯ ಸಾಮಾಜಿಕ ರೂಢಿಗಳಿಗೇ ಸವಾಲೊಡ್ಡುವಂತಹ ಸಂಪ್ರದಾಯ ಇದು. ರಾಮದೇವ್-ಕಿ-ಬಸ್ತಿ ಎಂಬ ಈ ಗ್ರಾಮದಲ್ಲಿ ಸುಮಾರು 600 ಕುಟುಂಬಗಳು ವಾಸಿಸುತ್ತಿವೆ. ವಿಚಿತ್ರ ಅಂದ್ರೆ ಈ ಗ್ರಾಮದ ಪುರುಷರು ಎರಡು ಬಾರಿ ಮದುವೆಯಾಗುತ್ತಾರೆ. ಇವರು ಏಕಪತ್ನಿತ್ವದ ಪದ್ಧತಿಯನ್ನು ಅನುಸರಿಸುವುದಿಲ್ಲ.

ಒಬ್ಬ ಪುರುಷ ಒಂದಕ್ಕಿಂತ ಹೆಚ್ಚು ಮದುವೆಯಾಗಬಹುದು ಎಂಬುದು ಇವರ ನಂಬಿಕೆ. ಒಂದೇ ಸೂರಿನಡಿ ಇಬ್ಬರು ಪತ್ನಿಯರೊಂದಿಗೆ ಇವರು ವಾಸಿಸುತ್ತಾರೆ. ಈ ಗ್ರಾಮದಲ್ಲಿ ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಇದು.

ಹಿಂದೂ ವಿವಾಹ ಕಾಯಿದೆಯಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ. ಆದರೆ ಇದಕ್ಕೆ ತದ್ವಿರುದ್ಧವಾಗಿ ಈ ಗ್ರಾಮವು ಬಹುಪತ್ನಿತ್ವದಲ್ಲಿ ನಂಬಿಕೆ ಇಟ್ಟಿದೆ. ಈ ಆಚರಣೆಯ ಹಿಂದಿನ ತರ್ಕವು ಪುರುಷ ಉತ್ತರಾಧಿಕಾರಿಗಳನ್ನು ಹೊಂದುವ ಬಯಕೆಗೆ ಸಂಬಂಧಿಸಿದೆ. ಮೊದಲ ಪತ್ನಿ ಗಂಡು ಮಗುವಿಗೆ ಜನ್ಮ ನೀಡಲು ಸಾಧ್ಯವಿಲ್ಲ, ಆಕೆ ಹೆಣ್ಣು ಮಕ್ಕಳನ್ನೇ ಹೆರುತ್ತಾಳೆ ಎಂಬುದು ಈ ಗ್ರಾಮಸ್ಥರ ನಂಬಿಕೆ. ತಮ್ಮ ವಂಶಕ್ಕೆ ಪುರುಷ ಉತ್ತರಾಧಿಕಾರಿಯನ್ನು ಪಡೆಯುವ ಭರವಸೆಯಲ್ಲಿ ಎರಡನೇ ಮದುವೆಯಾಗುತ್ತಾರೆ. ಇದರಿಂದಾಗಿ ಸಮುದಾಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆಯಂತೆ.

ವಾರಸುದಾರನ ಹೆಸರಿನಲ್ಲಿ ಪುರುಷರು ಎರಡನೇ ಬಾರಿಗೆ ಮದುವೆಯಾಗುತ್ತಿದ್ದಾರೆ. ಈ ಪದ್ಧತಿ ಮುಂದುವರಿದಿರುವುದು ಸಮುದಾಯದೊಳಗೆ ಚರ್ಚೆಗೆ ಗ್ರಾಸವಾಗಿದೆ. ಈ ಸಂಪ್ರದಾಯದ ಬಗ್ಗೆ ವಿಚಾರವಾದಿಗಳು ಆಕ್ಷೇಪ ವ್ಯಕ್ತಪಡಿಸ್ತಿದ್ದಾರೆ. ಮೊದಲ ಪತ್ನಿ ಇದ್ದಾಗಲೇ ಮತ್ತೊಬ್ಬಳನ್ನು ಮದುವೆಯಾಗುವುದು ಮಹಿಳೆಯರ ಮೂಲಭೂತ ಮಾನವ ಹಕ್ಕುಗಳನ್ನು ಮತ್ತು ಸಮಾನತೆಯನ್ನು ಕಸಿದುಕೊಳ್ಳುತ್ತದೆ ಎಂಬುದು ಪ್ರಜ್ಞಾವಂತರ ವಾದ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read