ಈ ಮನೆ ಮದ್ದಿನಿಂದ ಉತ್ತಮಗೊಳ್ಳುತ್ತೆ ಮಕ್ಕಳ ನೆನಪಿನ ಶಕ್ತಿ

ಮಕ್ಕಳಿಗೆ ಓದಲು ಆಸಕ್ತಿ ಇದೆ. ಆದ್ರೆ ಓದಲು ಆಗ್ತಾ ಇಲ್ಲ. ಉತ್ತಮ ಅಂಕ ಪಡೆಯುವ ಕನಸು ಕಾಣ್ತಿದ್ದಾರೆ. ಆದ್ರೆ ನೆನಪಿನ ಶಕ್ತಿ ಕಡಿಮೆ ಇದೆ. ಎಷ್ಟೇ ಓದಿದ್ರೂ ವಿಷಯ ನೆನಪಿನಲ್ಲಿರೋದಿಲ್ಲ ಎಂಬ ಸಮಸ್ಯೆ ಅನೇಕ ಮಕ್ಕಳನ್ನು ಕಾಡುತ್ತದೆ.

ಪರೀಕ್ಷೆ ಹತ್ತಿರ ಬಂದಂತೆ ಮಕ್ಕಳ ಜೊತೆ ಪಾಲಕರು ಕೂಡ ಆತಂಕಕ್ಕೊಳಗಾಗ್ತಾರೆ. ಆದ್ರೆ ನೆನಪಿನ ಶಕ್ತಿ ಹೆಚ್ಚು ಮಾಡಿಕೊಂಡು ದುರ್ಬಲ ಮನಸ್ಸನ್ನು ಗಟ್ಟಿಯಾಗಿಸಿಕೊಳ್ಳೋದು ಕಷ್ಟದ ಕೆಲಸವಲ್ಲ. ಮನೆ ಮದ್ದಿನ ಮೂಲಕ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚು ಮಾಡಬಹುದು.

ಮನೆ ಮದ್ದಿಗೆ ಬೇಕಾಗುವ ಪದಾರ್ಥಗಳು : 30 ಗ್ರಾಂ ಸುಲಿದ ಬಾದಾಮಿ, 30 ಗ್ರಾಂ ಗಸಗಸೆ, 14 ಗ್ರಾಂ ಏಲಕ್ಕಿ ಪುಡಿ, 1750 ಮಿಲಿಗ್ರಾಂ ಸ್ವರ್ಣ ಭಸ್ಮ.

ತಯಾರಿಸುವ ವಿಧಾನ : ಮೊದಲು ಬಾದಾಮಿ, ಗಸಗಸೆ, ಏಲಕ್ಕಿಯನ್ನು ಮಿಕ್ಸಿ ಮಾಡಿಕೊಳ್ಳಿ. ಇದಕ್ಕೆ ಸ್ವರ್ಣ ಭಸ್ಮವನ್ನು ಹಾಕಿ ಒಂದು ಪಾತ್ರೆಯಲ್ಲಿ ಮುಚ್ಚಿಡಿ. ಒಂದು ದಿನದ ನಂತ್ರ ಸೇವನೆ ಶುರುಮಾಡಿ. ಬೆಳಿಗ್ಗೆ ಹಾಗೂ ಸಂಜೆ 2-2 ಗ್ರಾಂ ಬೆಣ್ಣೆ ಮತ್ತು ಸಕ್ಕರೆ ಜೊತೆ ಸೇವನೆ ಮಾಡಲು ಕೊಡಿ. ನಂತ್ರ ಮಕ್ಕಳ ಮೇಲಾಗುವ ಪರಿಣಾಮ ಗಮನಿಸಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read