ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಬುಧವಾರದಂದು ಪೂಂಛ್ ಜಿಲ್ಲೆಯಲ್ಲಿರುವ ನವಗ್ರಹ ಮಂದಿರಕ್ಕೆ ತೆರಳಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದ್ದಾರೆ.
ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ನಾಯಕರು ಮೆಹಬೂಬಾ ಮುಫ್ತಿ ಅವರದ್ದು ರಾಜಕೀಯ ಗಿಮಿಕ್ ಎಂದು ಹೇಳಿದ್ದರೆ, ಮುಸ್ಲಿಂ ಧಾರ್ಮಿಕ ಮುಖಂಡರು ಇದು ಇಸ್ಲಾಂ ವಿರೋಧಿ ನಡೆ ಎಂದು ಕಿಡಿ ಕಾರಿದ್ದಾರೆ.
ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಮೆಹಬೂಬಾ ಮುಫ್ತಿ, ಜಾತ್ಯಾತೀತ ರಾಷ್ಟ್ರವಾಗಿರುವ ಭಾರತದಲ್ಲಿ ನಾನು ವೈಯಕ್ತಿಕವಾಗಿ ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ. ನನ್ನ ಧರ್ಮ ಯಾವುದು ? ಅದನ್ನು ಹೇಗೆ ಪಾಲಿಸಬೇಕು ಎಂಬುದು ನನಗೆ ಗೊತ್ತಿದೆ. ನಾನು ಎಲ್ಲಿಗೆ ಹೋಗಬೇಕು ಎಂಬುದು ನನ್ನ ಸ್ವತಂತ್ರ ಆಯ್ಕೆ ಎಂದು ತಿರುಗೇಟು ನೀಡಿದ್ದಾರೆ.
J&K | PDP chief Mehbooba Mufti visited Navagraha temple in the Pooch district and offered prayers (15/03) pic.twitter.com/tEV2TAELjQ
— ANI (@ANI) March 16, 2023