ಮರು ಬಿಡುಗಡೆಯಾಗಲಿದೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಶಂಕರ್ ದಾದಾ ಎಂಬಿಬಿಎಸ್’

Watch Shankar Dada M.B.B.S. (Telugu) Full Movie Online | Sun NXT

ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಶಂಕರ್ ದಾದಾ ಎಂಬಿಬಿಎಸ್’ ಸಿನಿಮಾ 2004 ಅಕ್ಟೋಬರ್ 15 ರಂದು ತೆರೆ ಕಂಡು ನೂರು ದಿನಗಳ ಪ್ರದರ್ಶನ ಕಾಣುವ ಮೂಲಕ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಚಿತ್ರ ಬಿಡುಗಡೆಯಾಗಿ ಇಂದಿಗೆ 19 ವರ್ಷಗಳಾಗಿವೆ.

ಚಿತ್ರತಂಡ ಇದೀಗ ಮತ್ತೊಮ್ಮೆ ರೀ ರಿಲೀಸ್ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಮುಂದಿನ ತಿಂಗಳು ನವೆಂಬರ್ 4ರಂದು ಮತ್ತೊಮ್ಮೆ ಮರು ಬಿಡುಗಡೆಯಾಗಲಿದ್ದು, ಚಿರಂಜೀವಿ ಅಭಿಮಾನಿಗಳು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ.

ಬಾಲಿವುಡ್ ನ ಸಂಜಯ್ ದತ್ ನಟನೆಯ ‘ಮುನ್ನಾಬಾಯ್ ಎಂಬಿಬಿಎಸ್, ಚಿತ್ರದ ರಿಮೇಕ್ ಆದ ‘ಶಂಕರ್ ದಾದಾ ಎಂಬಿಬಿಎಸ್’ ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಸೇರಿದಂತೆ ಸೋನಾಲಿ ಬೇಂದ್ರೆ, ಶ್ರೀಕಾಂತ್, ಗಿರೀಶ್ ಕಾರ್ನಾಡ್, ಶರ್ವಾನಂದ್, ಎಂಎಸ್ ನಾರಾಯಣ, ದೀಪ್ತಿ, ಗೌತಮ್ ರಾಜು, ತಿರುಪತಿ ಪ್ರಕಾಶ್, ಕರಾಟೆ ಕಲ್ಯಾಣಿ  ತೆರೆಹಂಚಿಕೊಂಡಿದ್ದು, ಪವನ್ ಕಲ್ಯಾಣ್ ಅತಿಥಿ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಜಯಂತ್ ನಿರ್ದೇಶಿಸಿದ್ದು, ಜೆಮಿನಿ ಫಿಲಂ ಸರ್ಕ್ಯೂಟ್ ಬ್ಯಾನರ್ ನಡಿ ನಿರ್ಮಾಣ ನಿರ್ಮಾಣ ಮಾಡಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read