ನಟ ಚಿರಂಜೀವಿ ಖರೀದಿಸಿದ ಹೊಸ ಕಾರಿಗೆ ಬಯಸಿದ ನಂಬರ್‌ ಪಡೆಯಲು ಖರ್ಚು ಮಾಡಿದ ಹಣವೆಷ್ಟು….? ತಿಳಿದ್ರೆ ಬೆರಗಾಗ್ತೀರಾ….!

ಕ್ರಿಕೆಟರ್, ಫಿಲ್ಮ್‌ಸ್ಟಾರ್‌ ಹಾಗೂ ಅನೇಕ ಶ್ರೀಮಂತರಿಗೆ ವಾಚ್, ಶೂ, ಬೈಕ್ ಸೇರಿದಂತೆ ಐಶಾರಾಮಿ ಕಾರುಗಳನ್ನ ಖರೀದಿಸುವ ಕ್ರೇಜ್ ಇರುತ್ತೆ. ಅದಕ್ಕಾಗಿ ಲಕ್ಷ-ಲಕ್ಷ  ರೂಪಾಯಿಗಳನ್ನ ಹಿಂದೆ ಮುಂದೆ ನೋಡದೇ ಖರ್ಚು ಮಾಡುತ್ತಾರೆ. ಅದರಲ್ಲೂ ಚಿತ್ರನಟ, ನಟಿಯರು ಕೋಟಿ-ಕೋಟಿ ರೂಪಾಯಿ ಖರ್ಚು ಮಾಡಿ ಕಾರುಗಳನ್ನ ಖರೀದಿಸಿ ತಮ್ಮ ತಮ್ಮ ಪ್ರತಿಷ್ಠೆಯನ್ನು ಪ್ರದರ್ಶಿಸ್ತಿರ್ತಾರೆ.

ಇತ್ತಿಚೆಗೆ ಟಾಲಿವುಡ್ ನಟ ‘ಮೆಗಾ ಸ್ಟಾರ್’ ಚಿರಂಜೀವಿ ಕೂಡ ಹೊಸ ಕಾರೊಂದನ್ನ ಖರೀದಿ ಮಾಡಿದ್ದಾರೆ. ಅವರ ಆ ಸ್ಪೆಷಲ್ ಕಾರನ್ನ ನೋಡಿದವರೆಲ್ಲ ಫುಲ್ ಶಾಕ್ ಆಗ್ಹೋಗಿದ್ದಾರೆ. ಮೆಗಾಸ್ಟಾರ್ ಈಗ ಟೊಯೊಟಾ ಕಂಪನಿಯ ‘ವೆಲ್‌ಫೈರ್’ ಕಾರನ್ನ ಕೊಂಡುಕೊಂಡಿದ್ದಾರೆ. ಈ ಐಷಾರಾಮಿ ವಾಹನದ ಬೆಲೆ ಬರೋಬ್ಬರಿ 1.2 ಕೋಟಿ ರೂಪಾಯಿ, ಈ ಬೆಲೆ ಕೇಳಿ ನೀವು ಶಾಕ್ ಆದ್ರಿ ತಾನೇ?

ನಟ ಚಿರಂಜೀವಿ ಅವರು ಖರೀದಿ ಮಾಡಿರುವ ಈ ಕಾರಿನ ಇನ್ನೊಂದು ಸ್ಪೆಶಾಲಿಟಿ ಏನಂದ್ರೆ ಈ ಕಾರಿನ 1111 ನಂಬರ್ ಪ್ಲೇಟ್. ಅದಕ್ಕಾಗಿಯೇ ಅವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಕೆಲ ಮೂಲಗಳ ಪ್ರಕಾರ ಈ ನಂಬರ್ ರಜಿಸ್ಟ್ರೇಷನ್‌ಗೆ ಅಂತಾನೇ ಬರೋಬ್ಬರಿ 4.7 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.

ಚಿರಂಜೀವಿ ಅವರ ‘ಟೊಯೊಟಾ ವೆಲ್‌ಫೈರ್’ ಕಾರಿನ ನೋಂದಣಿ ಸಂಖ್ಯೆ TS 09 GB 1111 ಆಗಿದೆ. ತಮ್ಮ ಕಾರಿಗೆ ಇದೇ ನಂಬರ್ ಇರಬೇಕು ಅನ್ನೋದು ಅವರ ಬಹುದಿನದ ಆಸೆಯಾಗಿತ್ತು. ಅದಕ್ಕಾಗಿ ಅವರು ತೆಲಂಗಾಣದ ಖೈರತಾಬಾದ್‌ನಲ್ಲಿ ರಿಜಿಸ್ಟ್ರೇಷನ್ ಮಾಡಿಸಿದ್ದಾರೆ. ಚಿರಂಜೀವಿ ಅವರಿಗೆ 1111 ಸಂಖ್ಯೆ ಬಗ್ಗೆ ವಿಶೇಷ ಒಲವು ಇದೆ. ಹಾಗಾಗಿ ಅವರ ಎಲ್ಲ ಕಾರುಗಳಿಗೆ ಇದೇ ಸಂಖ್ಯೆ ಇರುವುದು ವಿಶೇಷ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read