ರೈತರ ಗೌರವಾರ್ಥ ಭತ್ತದ ಗದ್ದೆಯಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್‌ ಮಾಡಿಸಿದ ಯುವ ಜೋಡಿ

ಇತ್ತೀಚಿನ ದಿನಗಳಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್‌ಗಳು ಬಹಳ ರೊಮ್ಯಾಂಟಿಕ್ ಹಾಗೂ ಆವಿಷ್ಕಾರೀ ಥೀಂಗಳಲ್ಲಿ ಶೂಟ್ ಆಗುತ್ತಿವೆ. ಚಿತ್ರವಿಚಿತ್ರ ಥೀಂಗಳನ್ನು ಅರಸಿ ಹೊರಡುವ ಮದುಮಕ್ಕಳು ತಮ್ಮ ಪ್ರೀವೆಡ್ಡಿಂಗ್ ಫೋಟೋ ಶೂಟ್‌ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿ ಖುಷಿ ಪಡುತ್ತಾರೆ.

ಫಿಲಿಪ್ಪೀನ್ಸ್‌ನ ಜೋಡಿಯೊಂದು ತಮ್ಮ ಪ್ರೀವೆಡ್ಡಿಂಗ್ ಫೋಟೋಶೂಟ್‌ಗೆಂದು ಮಣ್ಣಿನ ಗದ್ದೆಯೊಂದರಲ್ಲಿ ಹೊರಳಾಡಿದ್ದಾರೆ. ತಾವು ರೈತರ ಮನೆ ಮಕ್ಕಳಾದ ಕಾರಣ ಈ ಥೀಂನಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದಾಗಿ ತಿಳಿಸಿದ್ದಾರೆ ಮದುಮಕ್ಕಳು.

ಜಾನ್ಸೀ ಗುಟೆರೆಜ಼್‌ ಹಾಗೂ ಇಮೀ ಬೋರಿನಾಗಾ ಎಂಬ ಯುವ ಜೋಡಿ ಹೀಗೆ ಮಣ್ಣಿನಲ್ಲಿ ತಮ್ಮ ಪ್ರೀವೆಡ್ಡಿಂಗ್ ಫೋಟೋ ಶೂಟ್‌ ಮಾಡಿಸಿದ್ದಾರೆ.

“ವ್ಯವಸಾಯಕ್ಕೆ ಸೂಕ್ತವಾದ ಬೆಲೆ ಸಿಗಬೇಕು ಎಂದು ನಾನು ಸದಾ ಹೇಳುತ್ತಲೇ ಬಂದಿದ್ದೇನೆ. ಬಿರು ಬೇಸಿಗೆಯಲ್ಲಿ ಮಣ್ಣಿನಲ್ಲಿ ಮುಳುಗಿ ಭತ್ತದ ಬಿತ್ತನೆ ಮಾಡುವುದು ಎಷ್ಟು ಕಷ್ಟವೆಂದು ಎಲ್ಲರಿಗೂ ತಿಳಿಯಲಿ ಎಂದು ಬಯಸುತ್ತೇನೆ. ಆದರೂ, ಎಲ್ಲ ಇದ್ದರೂ, ರೈತರು ಯಾವುದೇ ದೂರುಗಳಿಲ್ಲದೇ ಸಂತಸದಿಂದ ಬಾಳುತ್ತಿದ್ದಾರೆ. ಇದರಿಂದ ಪ್ರೇರಣೆ ಪಡೆದು ನಾವು ಪ್ರೀವೆಡ್ಡಿಂಗ್ ಫೋಟೋ ಶೂಟ್‌ ಮಾಡಿಸಿದ್ದೇವೆ,” ಎಂದು ಇಮೀ ತಿಳಿಸಿದ್ದಾರೆ.

LOOK: Engaged couple covers themselves in mud to promote farming in their  pre-wedding shoot • l!fe • The Philippine Star

This muddy pre-wedding photoshoot of a couple helps to promote farming -  Where In Bacolod

This muddy pre-wedding photoshoot of a couple helps to promote farming -  Where In Bacolod

Pre Wedding Photoshoot in the mud see photos here | ಕೆಸರಿನಲ್ಲೊಂದು ಪ್ರಿ  ವೆಡ್ಡಿಂಗ್‌ ಫೋಟೋಶೂಟ್.. ಇಲ್ಲಿವೆ ನೋಡಿ ಫೋಟೋಸ್‌ News in Kannada

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read